Kannada NewsKarnataka NewsLatest

ಶಿವಾಜಿ ಕಾಗಣಿಕರ್ ಅಭಿನಂದಿಸಿದ ಶಂಕರಗೌಡ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಪರಿಸರ ಹೋರಾಟಗಾರ ಶಿವಾಜಿ ಕಾಗಣಿಕರ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಅಭಿನಂದಿಸಿದರು.

ಕಾಗಣಿಕರ್ ಅವರ ನಿರಂತರ ಹೋರಾಟ, ಪರಿಸರಕ್ಕೆ ಅವರ ಕೊಡುಗೆಗಳನ್ನು ಪ್ರಶಂಸಿಸಿದರು. ಪ್ರಶಸ್ತಿಗೆ ಕಾಗಣಿಕರ್ ನಿಜವಾಗಿಯೂ ಅರ್ಹರಾಗಿದ್ದು, ಇನ್ನೂ ಮೊದಲೇ ಅವರಿಗೆ ಈ ಪ್ರಶಸ್ತಿ ಸಿಗಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಈ ವೇಳೆ ತಮ್ಮ ಹೋರಾಟವನ್ನು ಮೆಲುಕು ಹಾಕಿದ ಶಿವಾಜಿ ಕಾಗಣಿಕರ್, ನರೇಗಾ ಯೋಜನೆಯನ್ನು ಅನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾಗಿದೆ ಎಂದರು. ಪರಿಸರದ ಉಳಿವಿಗಾಗಿ ಮತ್ತು ಬೆಳಗಾವಿಯ ಜಿಲ್ಲಾ ಆಸ್ಪತ್ರೆಯ ಅಭಿವೃದ್ಧಿ ಆಗಬೇಕಾದ ಕೆಲಸಗಳ ಕುರಿತು ಶಂಕರಗೌಡ ಪಾಟೀಲ ಅವರ ಗಮನ ಸೆಳೆದರು.

ಜಿಲ್ಲಾ ಆಸ್ಪತ್ರೆಗೆ ತಾವು ಈಗಾಗಲೆ ಭಟಿ ನೀಡಿ ಪರಿಶೀಲಿಸಿದ್ದು, ಅಲ್ಲಿನ ಕೊರತೆಗಳನ್ನು ಗಮನಿಸಿದ್ದೇನೆ. ಈ ಸಂಬಂಧ ಬಿಮ್ಸ್ ನಿರ್ದೇಶಕರಿಗೆ ಪತ್ರವನ್ನು ಬರೆಯಲಾಗಿದೆ. ಸಧ್ಯದಲ್ಲೇ ಆಸ್ಪತ್ರೆ ಸುಧಾರಣೆ ಸಂಬಂಧ ಸಭೆ ನಡೆಸುವುದಾಗಿ ಶಂಕರಗೌಡ ಪಾಟೀಲ ಶಿವಾಜಿ ಕಾಗಣಿಕರ್ ಅವರಿಗೆ ತಿಳಿಸಿದರು.

Home add -Advt

Related Articles

Back to top button