ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ – ಸಚಿವೆ ಶಶಿಕಲಾ ಜೊಲ್ಲೆ ಪ್ರಯತ್ನದಿಂದ ನಿಪ್ಪಾಣಿ ಮತಕ್ಷೇತ್ರದ ವಿವಿಧ ಗ್ರಾಮಗಳ ಒಟ್ಟು 17 ರೈತರಿಗೆ ಸುಮಾರು 42.5 ಲಕ್ಷ ರೂ. ಸಾಮಗ್ರಿ ವಿತರಣೆ ಮಾಡಲಾಯಿತು.
ಅಂಬೇಡ್ಕರ ನಿಗಮ ಹಾಗೂ ಹಿಂದುಳಿದ ದೇವರಾಜ ಅರಸು ಯೋಜನೆಯಿಂದ “ಗಂಗಾ ಕಲ್ಯಾಣ” ಪೈಪ್ ಲೈನ್, ಮೋಟಾರ್, ವಿದ್ಯುತ್ ಉಪಕರಣಗಳು ಹಾಗೂ ಅಗತ್ಯ ಸಾಮಗ್ರಿಗಳನ್ನು ಜನಪ್ರತಿನಿಧಿಗಳು, ಊರಿನ ಹಿರಿಯರು ವಿತರಿಸಿದರು.
“ತುತ್ತು ಅನ್ನವ ತಿನ್ನುವ ಮೊದಲು ರೈತನನ್ನು ನೆನೆ” ಎಂಬ ನಾಣ್ಣುಡಿಯಂತೆ, ಇಂದು ನಾವೆಲ್ಲರೂ ಹಸಿವೆ ಇಲ್ಲದೆ ನಿಶ್ಚಿಂತೆಯಿಂದ ಇದ್ದೇವೆಂದರೆ ಅದಕ್ಕೆ ರೈತನ ಶ್ರಮದ ಬೆವರೇ ಕಾರಣ. ಆದರೆ ಪ್ರಕೃತಿಯ ಮುಂದೆ ರೈತ ಕೆಲವೊಮ್ಮೆ ಕಂಗಾಲಾಗಿಬಿಡುತ್ತಾನೆ. ಸರಿಯಾದ ವೇಳೆಗೆ ಮಳೆ ಬಾರದೆ ತಾನು ಬೆಳೆದ ಬೆಳೆಯನ್ನು ಕಾಪಾಡಲು ಹೆಣಗಾಡುವ ಪರಿಸ್ಥಿತಿ ನಮ್ಮ ಅನ್ನದಾತರಿಗೆ ಬರಲೇಬಾರದು ಎಂಬ ಮಹದಾಸೆಯಿಂದ ಸರ್ಕಾರ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿದೆ. ಇದರಡಿಯಲ್ಲಿ ಅತಿಸಣ್ಣ ರೈತರ ಖುಷ್ಕಿ ಜಮೀನಿಗೆ ನೀರಾವರಿ ಸೌಲಭ್ಯ ಪಡೆಯಲು ವೈಯಕ್ತಿಕ ನೀರಾವರಿ, ಕೊಳವೆ ಬಾವಿ, ತೆರೆದ ಬಾವಿ ಮತ್ತು ಏತ ನೀರಾವರಿ ಯೋಜನೆಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಶಿಕಲಾ ಜೊಲ್ಲೆ ಸಂದೇಶ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ