Latest

ಶಶಿಕಲಾ ನಟರಾಜನ್ ಬೆಂಬಲಿಗರ ಕಾರು ಬೆಂಕಿಗಾಹುತಿ; ಮಾರ್ಗ ಮಧ್ಯೆಯೇ ಹೊತ್ತಿ ಉರಿದ ವಾಹನ

ಪ್ರಗತಿವಾಹಿನಿ ಸುದ್ದಿ; ಕೃಷ್ಣಗಿರಿ: ನಾಲ್ಕು ವರ್ಷಗಳ ಬಳಿಕ ಚಿನ್ನಮ್ಮ ಶಶಿಕಲಾ ನಟರಾಜನ್ ತಮಿಳುನಾಡಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿರುವ ಅಭಿಮಾನಿಗಳು, ಬೆಂಬಲಿಗರು ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ. ಈ ನಡುವೆ ಅವಘಡವೊಂದು ಸಂಭವಿಸಿದೆ.

ಚಿನ್ನಮ್ಮನಿಗೆ ಭರ್ಜರಿ ಸ್ವಾಗತ ಕೋರಿ ಸಂಭ್ರಮಾಚರಿಸುವ ನಿಟ್ಟಿನಲ್ಲಿ ಕೃಷ್ಣಗಿರಿ ಬಳಿ ಕಾರಿನಲ್ಲಿ ತರಲಾಗಿದ್ದ ಪಟಾಕಿ ಏಕಾಏಕಿ ಸಿಡಿದು, ಎರಡು ಕಾರುಗಳು ಸುಟ್ಟು ಭಸ್ಮವಾಗಿವೆ. ಸಂಭ್ರಮಾಚರಣೆಗೆಂದು ಕಾರಿನಲ್ಲಿ ಪಟಾಕಿ ಇರಿಸಿ ತರಲಾಗಿತ್ತು ಎನ್ನಲಾಗಿದೆ. ಆದರೆ ರಸ್ತೆ ಮಧ್ಯೆ ನಿಲ್ಲಿಸಿದ್ದ ಕಾರಿನಲ್ಲಿ ಪಟಾಕಿ ಸಿಡಿದು ಬೆಂಕಿ ಹೊತ್ತಿಕೊಂಡಿದ್ದು, ಅವಘಡದಲ್ಲಿ ಎರಡು ಕಾರುಗಳು ಬೆಂಕಿಗಾಹುತಿಯಾಗಿವೆ.

Home add -Advt

ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ನಾಲ್ಕು ವರ್ಷಗಳ ಬಳಿಕ ತವರಿಗೆ ಚಿನ್ನಮ್ಮ; ಶಶಿಕಲಾ ಸ್ವಾಗತಕ್ಕೆ ಕಾಯುತ್ತಿರುವ ಅಭಿಮಾನಿಗಳು

Related Articles

Back to top button