Kannada NewsKarnataka NewsLatestPolitics

*ಗದ್ದೆಗಿಳಿದು ಭತ್ತದ ನಾಟಿ ಮಾಡಿದ BJP ಶಾಸಕಿ ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಗದ್ದೆಗಿಳಿದು ನಾಟಿ ಮಾಡುವುದು ಒಂದು ಪುಣ್ಯದ ಕೆಲಸ. ಏಕೆಂದರೆ ಈ ಕೈಗಳು ಅದೆಷ್ಟೋ ಜನರ ಹಸಿವು ನೀಗಿಸುತ್ತದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

Home add -Advt

ತೆಲಂಗಾಣ ರಾಜ್ಯದ ಬಾಲ್ಕೊಂಡ ಮತಕ್ಷೇತ್ರದ ಭೀಮಗಲ್ ನಲ್ಲಿ ರೈತ ಮಹಿಳೆಯರೊಂದಿಗೆ ಮಾಜಿ ಸಚಿವೆ, ನಿಪ್ಪಾಣಿ ಮತಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಭತ್ತ ನಾಟಿ ಮಾಡಿ, ಅವರ ಪರಿಶ್ರಮಕ್ಕೆ ಗೌರವ ಸಲ್ಲಿಸಿದರು.

ಈ ವೇಳೆ ಮಾತನಾಅಡಿದ ಶಶಿಕಲಾ ಜೊಲ್ಲೆ, ಭತ್ತದ ನಾಟಿ ಮಾಡುವುದು ಒಂದು ಪುಣ್ಯದ ಕೆಲಸ. ರೈತರ ಕೈಗಳು ಎಷ್ಟೋ ಜನರ ಹಸಿವು ನೀಗಿಸುತ್ತದೆ. ಉತ್ತಮ ಫಸಲು ಸಿಕ್ಕಿ, ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿ ಎಂದು ಆಶಿಸಿದರು. ಇಂತಹ ಪುಣ್ಯದ ಕೆಲಸದಲ್ಲಿ ನಾನು ಭಾಗಿಯಾದದ್ದು ನನ್ನ ಸೌಭಾಗ್ಯ ಎಂದರು.

Related Articles

Back to top button