Belagavi NewsBelgaum NewsCrimeKannada NewsKarnataka NewsNationalPolitics

*ಶಿವಂ ಹಗರಣ ಸಿಐಡಿಗೆ: ಶಿವಾನಂದ ನೀಲಣ್ಣವರ್ ಸಂಗ್ರಹಿಸಿದ ಹಣವೆಷ್ಟು? ಜಿಲ್ಲಾಧಿಕಾರಿ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ಎಸ್ ನೀಲಣ್ಣವರ್ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಕಳೆದ 24 ಗಂಟೆಯಲ್ಲಿ ಬೆಳಗಾವಿ ಎಸಿ ನೇತೃತ್ವದ ಅಧಿಕಾರಿಗಳ ತಂಡ ಶಿವಾನಂದ ನೀಲಣ್ಣವರ್ ಸಾಮ್ರಾಜ್ಯವನ್ನು ಜಾಲಾಡಿದ್ದು ಇವತ್ತು ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರು ಜಂಟಿ ಸುದ್ದಿಗೋಷ್ಠಿ ಮಾಡಿ ಈವರೆಗಿನ ತನಿಖೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ ಆದಾಯದ ಬಗ್ಗೆ ನಿನ್ನೆ ಸಂಪೂರ್ಣವಾಗಿ ಬೆಳಗಾವಿ ಎಸಿ ಶ್ರವಣ್ಕುಮಾರ್ ಅವರ ನೇತೃತ್ವದಲ್ಲಿ ತನಿಖೆ ನಡೆಸಿದ ಅಧಿಕಾರಿಗಳ ತಂಡ ನಿನ್ನೆಯೇ ಶಿವಾನಂದ ನೀಲಣ್ಣವರ್ ಮೇಲೆ ಎಫ್ ಐ ಆರ್ ದಾಖಲಿಸಿ ಅವರನ್ನು ಬಂಧಿಸಿದ್ದಾರೆ. ಸಧ್ಯ ಪೊಲೀಸರ ಕಸ್ಟಡಿಯಲ್ಲಿರುವ ನೀಲಣ್ಣವರ್ ಅವರನ್ನು ಕರೆದುಕೊಂಡು ಬೆಳಗಾವಿ ಪೊಲೀಸರು ಪಂಚನಾಮೆಗೆ ಇಳಿದಿದ್ದು ಇಂದು ಶಿವಬಸವ ನಗರಲ್ಲಿರುವ ಅವರ ಕಚೇರಿಯಲ್ಲಿ ಪೊಲೀಸರು ಹಾಗೂ ಸಿಐಡಿ ಅಧಿಕಾರಿಗಳು ಪಂಚನಾಮೆಯನ್ನು ನಡೆಸಿದರು. 

ಇನ್ನು ಈವರೆಗೆ ತನಿಖೆಯಲ್ಲಿ ಆದ ಬೆಳವಣಿಗೆಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿ ಮೊಹಮ್ಮದ ರೋಷನ್ ಒಂದು ತಿಂಗಳ ಹಿಂದೆ ಕೆಪಿಐಡಿ ಅಡಿಯಲ್ಲಿ ಸೆಲ್ ರಚನೆ ಮಾಡಿ ಶಿವಂ ಅಸೋಸಿಯೇಟ್ಸ್ ಮೇಲೆ ನಿಗಾವಹಿಸಲಾಗಿತ್ತು. 

Home add -Advt

ಅವರು ಸೆಬಿ ಡೈರೆಕ್ಟರ್ಸ್, ಆರ್ ಬಿ ಐ ಡೈರೆಕ್ಟರ್ಸ್ ಸಹಕಾರಿ ಸಂಘದ ನಿಯಮ ಪಾಲನೇ ಮಾಡಿಲ್ಲ ಎನ್ನುವುದು ತನಿಖೆಯಲ್ಲಿ ಕಂಡು ಬಂದಿದೆ. ಈವರಗೆ 50 ಕೋಟಿಗೂ ಮೀರಿ ಪ್ರಾಡ್ ಆಗಿರುವ ಶಂಕೆ ಇದೆ. ಸಧ್ಯ ಎಷ್ಟು ಹಣ ಠೇವಣಿ ಕೂಡಿದೆ‌ ಹಾಗೂ ಅದು ಎಲ್ಲಿದೆ ಎನ್ನುವುದನ್ನು ತನಿಖೆ ಮಾಡುತ್ತಿದ್ದೆವೆ. ಜನ ಹೆಚ್ಚಿನ ಬಡ್ಡಿಯ ಆಸೆಗೆ ಬಿದ್ದು ಇಂತಹ ಕಂಪನಿಗಳಲ್ಲಿ ಹಣ ಹೂಡಿಕೆ ‌ಮಾಡಬಾರದು ಎಂದು ಮನವಿ ಮಾಡಿದರು. 

ಬಳಿಕ ಮಾತನಾಡಿದ ಪೊಲೀಸ್ ಆಯುಕ್ತರು ಶಿವಾನಂದ ನೀಲಣ್ಣವರ್ ಅವರ ಪ್ರಕರಣ ಈಗ ಸಿಐಡಿಗೆ ಬೆಳಗಾವಿ ಪೊಲೀಸರು ಹಸ್ತಾಂತರಿಸಿದ್ದು ಇಲ್ಲಿಂದ ಪ್ರಕರಣದ ತನಿಖೆಯನ್ನು ಸಿಐಡಿ ತಂಡ ನಡೆಸಲಿದೆ. ಇನ್ನು ಶಿವಾನಂದ ನೀಲಣ್ಣವರ್ ಮಾತನಾಡಿದ್ದ ವಿಡಿಯೋಗಳು ಸಮಾಜಿಕ ಜಾಲತಾಣಾಗಳಲ್ಲಿ ವೈರಲ್ ಆಗಿದ್ದು ಅದರ ಕುರಿತು ತನಿಖೆ ನಡೆಸುತ್ತಿದ್ದೆವೆ. 

ಶಿವಾನಂದ ನೀಲಣ್ಣವರ್ ತನ್ನ ಬಳಿ 15 ಸಾವಿರ ಬಂದೂಕು ಇವೆ ಎಂದು ಮಾತನಾಡಿದ್ದ ಅದು‌ ನಮಗೆ ಟ್ರಿಗರ್ ಆಗಿತ್ತು. ಇಂದು ಸಿಐಡಿಗೆ ಈ ಪ್ರಕರಣವನ್ನು ನಾವು ಹಸ್ತಾಂತರ ಮಾಡುತ್ತೆವೆ ನಂತರ ಅವರು ಈ ಪ್ರಕರಣದ ತನಿಖೆಯನ್ನು ಮಾಡಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ತಿಳಿಸಿದರು.

Related Articles

Back to top button