ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾಗಿರುವ ನೇಕಾರರಿಗೆ ನೆರವಾಗುವ ಉದ್ದೇಶದಿಂದ ಸೇವಾಭಾರತಿ ವತಿಯಿಂದ ಒಂದು ತಿಂಗಳ ಅಭಿಯಾನ ಆರಂಭಿಸಲಾಗಿದೆ.
ಜೂನ್ 22ರಿದಂ ಜುಲೈ 21ರ ವರೆಗೆ ಅಭಿಯಾನ ನಡೆಯಲಿದ್ದು ಇದರ ಅಂಗವಾಗಿ ಧರ್ಮನಾಥ ಭವನ ಮತ್ತು ವಡಗಾವಿಯಲ್ಲಿ ಮಾರಾಟ ಮಳಿಗೆ ತೆರೆಯಲಾಗಿದೆ. ಇಲ್ಲಿ ನೇಕಾರರು ತಯಾರಿಸಿದ ಸೀರೆಗಳ ಮಾರಾಟ ಮಾಡಲಾಗುತ್ತದೆ.
ಈ ಸಮಾರಂಭದ ಉದ್ಘಾಟನೆಯನ್ನು ಸೋಮವಾರ ಧರ್ಮನಾಥ ಭವನದಲ್ಲಿ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿಗಳು ನೆರವೇರಿಸಿದರು. ನಾಗನೂರು ರುದ್ರಾಕ್ಷಿಮಠದ ಡಾ ಅಲ್ಲಮಪ್ರಭು ಮಹಾಸ್ವಾಮೀಜಿಗಳು, ಆರ್ಷ ವಿದ್ಯಾಪೀಠದ ಕೈವಲ್ಯಾನಂದ ಸ್ವಾಮೀಜಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ