Belagavi NewsBelgaum NewsKannada NewsKarnataka NewsLatestPolitics

*ಕಲ್ಲೋಳಿ ಶ್ರೀ ಮಹಾಲಕ್ಷ್ಮೀ ಸಹಕಾರಿಗೆ ರೂ 2.51 ಕೋಟಿ ಲಾಭ*

ಪ್ರಗತಿವಾಹಿನಿ ಸುದ್ದಿ: ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘವು ಕಳೆದ ಆರ್ಥಿಕ ವರ್ಷದಲ್ಲಿ 2.51 ಕೋಟಿ ರೂ ಲಾಭ ಗಳಿಸಿದೆ ಎಂದು ಸಹಕಾರಿಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಗುರುವಾರ ಸಹಕಾರಿಯ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 12,612 ಸದಸ್ಯರಿದ್ದು, ರೂ 20.12 ಲಕ್ಷ ಶೇರು ಬಂಡವಾಳ ಹಾಗೂ ರೂ 6.96 ಕೋಟಿ ನಿಧಿಯಿದೆ. ಹಣಕಾಸು ವರ್ಷದಲ್ಲಿ ರೂ 71.10 ಕೋಟಿ ಠೇವು ಸಂಗ್ರವಾಗಿದೆ. ಸಹಕಾರಿಯಿಂದ ಇದುವರೆಗೆ ರೂ 66.71 ಕೋಟಿ ಸಾಲ ವಿತರಿಸಲಾಗಿದೆ. 8.89 ಕೋಟಿ ರೂಗಳನ್ನು ಬ್ಯಾಂಕ ಮತ್ತು ಇನ್ನಿತರ ಸಂಘಗಳಲ್ಲಿ ಗುಂತಾವಣೆ ಮಾಡಲಾಗಿದ್ದು, ರೂ 78.10 ಕೋಟಿ ದುಡಿಯುವ ಬಂಡವಾಳ ಹಾಗೂ ರೂ 318 ಕೋಟಿ ವಹಿವಾಟು ಹೊಂದಿದೆ ಎಂದರು.

ಸಹಕಾರಿಯ ಗ್ರಾಹಕರಿಗೆ ಮಹಾಲಕ್ಷ್ಮೀ ಕಿರು ಸಾಲ ಯೋಜನೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ ಎಂದರಲ್ಲದೇ ಕಲ್ಲೋಳಿ ಪಟ್ಟಣದಲ್ಲಿ ನಿರ್ಮಿಸುತ್ತಿರುವ ಪ್ರಧಾನ ಕಛೇರಿಯ ಕಟ್ಟಡವು ಮುಕ್ತಾಯ ಹಂತಕ್ಕೆ ತಲುಪಿದ್ದು ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ ಎಂದರು.

ಸಹಕಾರಿಯ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ, ಉಪಾಧ್ಯಕ್ಷ ಶ್ರೀಶೈಲ ತುಪ್ಪದ, ನಿರ್ದೇಶಕರಾದ ಬಾಳಪ್ಪ ಸಂಗಟಿ, ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಶಿವಗೊಂಡ ವ್ಯಾಪಾರಿ, ಶಿವಪ್ಪ ಗೊಸಬಾಳ, ಸಿದ್ದಪ್ಪ ಹೆಬ್ಬಾಳ, ಮಲ್ಲಿಕಾರ್ಜುನ ಹುಲೆನ್ನವರ, ಸೋಮಲಿಂಗ ಹಡಿಗನಾಳ, ಮಾರುತಿ ಮಕ್ಕಳಗೇರಿ, ಬೆಟಗೇರಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಈರಪ್ಪ ದೇಯನ್ನವರ, ಘಟಪ್ರಭಾ ಶಾಖೆಯ ರಾಜು ಕತ್ತಿ, ಪ್ರಧಾನ ವ್ಯವಸ್ಥಾಪಕ ಹನಮಂತ ಕಲಕುಟ್ರಿ, ಶಾಖಾ ವ್ಯವಸ್ಥಾಪಕರಾದ ಪರಪ್ಪ ಗಿರೆಣ್ಣವರ, ಶಂಕರ ಕೌಜಲಗಿ ಇದ್ದರು.

Related Articles

Back to top button