Kannada NewsKarnataka NewsLatest

*ಸಾರಿಗೆ ಬಸ್ ಗೆ ಚುನಾವಣಾ ವೀಕ್ಷಕರಿದ್ದ ವಾಹನ ಡಿಕ್ಕಿ*

ಪ್ರಗತಿವಾಹಿನಿ ಸುದ್ದಿ: ರಸ್ತೆ ಬದಿ ನಿಂತಿದ್ದ KKRTC ಸಾರಿಗೆ ಬಸ್ ಗೆ ಚುನಾವಣಾ ವೀಕ್ಷಕರಿದ್ದ ವಾಹನ ಡಿಕ್ಕಿ ಹೊಡೆದ ಪರಿಣಾಮ ಡಿಕ್ಕಿ ರಭಸಕ್ಕೆ ಚುನಾವಣಾ ವೀಕ್ಷಕರ ಜೀಪ್ ಸಂಪೂರ್ಣ ಜಖಂ ಆಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿದ್ಯಾನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.‌

Home add -Advt

ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತ ಸಂಭವಿಸಿದ್ದು, ಚುನಾವಣಾ ವೀಕ್ಷಕರ ವಾಹನದ ಡ್ರೈವರ ಶಿವಾನಂದಗೆ ಗಂಭೀರಗಾಯವಾಗಿದೆ.‌ ಅದೆ ವಾಹನದಲ್ಲಿ ಇದ್ದ ಓರ್ವ ಪೇದೆಗೆ ಸಣ್ಣಪುಟ್ಟ ಗಾಯವಾಗಿದೆ.‌ ಗಾಯಾಳುಗಳನ್ನು ಗಂಗಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.‌

ಅಪಘಾತವಾದ ವಾಹನ ಮೀನುಗಾರಿಕೆ ಇಲಾಖೆಗೆ ಸೇರಿದೆ ಲೋಕಸಭಾ ಚುನಾವಣೆ ನಿಮಿತ್ತವಾಗಿ ಕರ್ತವ್ಯದಲ್ಲಿ ಇತ್ತು. ಈ ಅಪಘಾತ ಸಂಭವಿಸುತ್ತಿದ್ದಂತೆ ಘಟನೆ ಮಾಹಿತಿ ಪಡೆದು ಆಸ್ಪತ್ರೆಗೆ ದಾವಿಸಿದ ಗಂಗಾವತಿ ತಹಶಿಲ್ದಾರ್ ಯು.ನಾಗರಾಜ್ ಅವರು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚಿಸಿದ್ದಾರೆ.‌

Related Articles

Back to top button