Latest

ಶ್ರೀಲೀಲಾ ತಾಯಿ ಸ್ವರ್ಣಲತಾ ವಿರುದ್ಧ ಮತ್ತೊಂದು FIR

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಖ್ಯಾತ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದು, ಇದೀಗ ಸ್ವರ್ಣಲತಾ ವಿರುದ್ಧ ಅವರ ಪತಿಯೇ ಪ್ರಕರಣ ದಾಖಲಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇತ್ತೀಚೆಗೆ ಅಲಯನ್ಸ್ ವಿಶ್ವವಿದ್ಯಾಲಯಕ್ಕೆ ನುಗ್ಗಿ ಗಲಾಟೆ ಮಾಡಿದ ಹಿನ್ನೆಲೆಯಲ್ಲಿ ಸ್ವರಣಲತಾ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಎಫ್ ಐ ಆರ್ ದಾಖಲಾಗಿದೆ ಎಂದು ತಿಳಿದಿಬಂದಿದೆ.

ನನ್ನ ಫ್ಲ್ಯಾಟ್ ಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಲ್ಲದೇ, ಬೀಗ ಒಡೆದು ಮನೆಗೆ ನುಗ್ಗಿದ್ದಾರೆ ಎಂದು ಆರೋಪಿಸಿ ಸ್ವರ್ಣಲತಾ ವಿರುದ್ಧ ಪತಿ ಸುಭಾಕರ್ ರಾವ್ ಬೆಂಗಳೂರಿನ ಆಡುಗೋಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬೆಂಗಳೂರಿನ ಕೋರಮಂಗಲದ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ಸುಭಾಕರ್ ರಾವ್ ತಮ್ಮ ಫ್ಲ್ಯಾಟ್ ನ್ನು ಪತ್ನಿ ಸ್ವರ್ಣಲತಾ ಅವರಿಗೆ ನೀಡಿದ್ದರಂತೆ. ಆದರೆ ನಂತರದ ದಿನಗಳಲ್ಲಿ ಪತಿ ಪತ್ನಿ ನಡುವೆ ಮನಸ್ತಾಪವುಂಟಾಗಿ ಸುಭಾಕರ್ ಫ್ಲ್ಯಾಟ್ ಗೆ ಬೀಗ ಹಾಕಿದ್ದರು ಎನ್ನಲಾಗಿದೆ. ಅಕ್ಟೋಬರ್ 3ರಂದು ಸ್ವರ್ಣಲತಾ ಅಕ್ರಮವಾಗಿ ಫ್ಲ್ಯಾಟ್ ಪ್ರವೇಶಿಸಿ ಬೀಗ ಒಡೆದು ಮನೆಗೆ ನುಗ್ಗಿದ್ದಾರೆ ಎಂದು ಸುಭಾಕರ್ ರಾವ್ ಆರೋಪಿಸಿದ್ದಾರೆ.

Home add -Advt

ಈ ಹಿನ್ನೆಲೆಯಲ್ಲಿ ಆಡುಗೋಡಿ ಠಾಣೆಯಲ್ಲಿ ದೂರು ನೀಡಿದ್ದು, ಸ್ವರ್ಣಲತಾ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ದೇಶವಾಸಿಗಳಿಗೆ ಧೈರ್ಯ, ಸಂಯಮ, ಸಕಾರಾತ್ಮಕ ಶಕ್ತಿಗಾಗಿ ಹಾರೈಸಿದ ಪ್ರಧಾನಿ ಮೋದಿ

https://pragati.taskdun.com/latest/pm-modi-greets-people-on-vijayadashami-wishes-them-positive-energy/

Related Articles

Back to top button