Kannada NewsLatest

ಬೆಳಗಾವಿ; 46 ಮಕ್ಕಳಿಗೆ ಕೊರೊನಾ ಸೋಂಕು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಮಕ್ಕಳಲ್ಲಿಯೂ ಮಹಾಮಾರಿ ಕಾಡುತ್ತಿದೆ. ಬೆಳಗಾವಿಯಲ್ಲಿ ಬರೋಬ್ಬರಿ 46 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

18 ವರ್ಷದೊಳಗಿನ 46 ಮಕ್ಕಳು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಮೇ 18ರವರೆಗೆ 20 ಮಕ್ಕಳಲ್ಲಿ ಪಾಸಿಟಿವ್ ಬಂದಿದ್ದು, ಇದೀಗ ಒಟ್ಟು 46 ಮಕ್ಕಳಿಗೆ ಸೋಂಕು ಹರಡಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಚಿಕ್ಕ ಮಕ್ಕಳು ಕೂಡ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಕೊರೊನಾ 3ನೇ ಅಲೆ ಅಬ್ಬರ ಸದ್ದಿಲ್ಲದೇ ಶುರುವಾಗಿದೆಯೇ ಎಂಬ ಆತಂಕ ಎದುರಾಗಿದೆ.
ಜನರ ಸಂಯಮ, ತಾಳ್ಮೆಗೆ ಕೃತಜ್ಞತೆಗಳು ಎಂದ ಪ್ರಧಾನಿ ಮೋದಿ

Related Articles

Back to top button