ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸಂಕಷ್ಟದಿಂದ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಈನಡುವೆ ರಾಜ್ಯದಲ್ಲಿ ನಾಳೆಯಿಂದ ಲಾಕ್ ಡೌನ್ ಜಾರಿಯಾಗುತ್ತಿದೆ. ಆರ್ಥಿಕ ಸಂಕಷ್ಟಕ್ಕೀಡಾಗಿರುವ ದುಡಿಯುವ ವರ್ಗಕ್ಕೆ ನೆರವು ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಸಲಹೆ ನಿಡಿರುವ ಸಿದ್ದರಾಮಯ್ಯ, ಬಡ ಜನರ ಆರ್ಥಿಕ ಸಹಾಯದ ಜೊತೆಗೆ ಸೋಂಕಿತರ ರಕ್ಷಣೆಗೂ ಮುಂದಾಗುವಂತೆ ತಿಳಿಸಿದ್ದಾರೆ.
* ಪ್ರತಿಯೊಬ್ಬರಿಗೂ ತಿಂಗಳಿಗೆ 10 ಕೆಜಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ ದಿನಸಿ ಪದಾರ್ಥಗಳ ಫುಡ್ ಕಿಟ್
* ಬಿಪಿಎಲ್ ಕುಟುಂಬಕ್ಕೆ ಆರಂಭದ ತಿಂಗಳು 10,000 ರೂ ನಂತರ ತಿಂಗಳಿಗೆ 6,000 ರೂ ಆರ್ಥಿಕ ನೆರವು
* ರೈತರು, ಕುಶಲಕರ್ಮಿಗಳು, ಕಾರ್ಮಿಕರು, ಚಾಲಕರು ಮೊದಲಾದ ದುಡಿಯುವ ವರ್ಗಕ್ಕೆ 10,000 ರೂ ನೆರವು
* ಸಣ್ಣ, ಅತಿಸಣ್ಣ, ಗೃಹ ಕೈಕಾರಿಕೆ, ವಾಹನ ಮಾಲೀಕರ ಸಭೆ ನಡೆಸಿ ಸೂಕ್ತ ಪ್ಯಾಕೆಜ್ ಘೋಷಣೆಘಟಕ ಸ್ಥಾಪನೆ
* ಪ್ರಸ್ತುತ ಇರುವ ಹಣದುಬ್ಬರವನ್ನು ಆಧರಿಸಿ ನರೇಗಾ ಕೂಲಿ ಮೊತ್ತವನ್ನು ಪರಿಷ್ಕರಿಸಿ
* ನರೇಗಾ ಯೋಜನೆಯಡಿ ಕೆಲಸ ಮಾಡಿದವರಿಗೆ 4 ತಿಂಗಳ ಬಾಕಿ ಹಣ ಪಾವತಿ
* ಲಸಿಕೆ, ಆಕ್ಸಿಜನ್ ಕಾಳಸಂತೆ ಮಾರಾಟಕ್ಕೆ ಬ್ರೇಕ್
* ಗೌಡನ್ ನಲ್ಲಿ ಇಡಲಾಗಿರುವ ವೆಂಟಿಲೇಟರ್ ಗಳನ್ನು ಬಳಸಿ
* ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು, ನರ್ಸ್ ಗಳನ್ನು ಚಿಕಿತ್ಸೆಗಾಗಿ ನಿಯೋಜನೆ
* ಅಗತ್ಯವಿದ್ದರೆ ನಿವೃತ್ತ ವೈದ್ಯರು, ದಾದಿಯರ ನೇಮಕ
* ಕ್ರೀಡಾಂಗಣ, ಕಲ್ಯಾಣಮಂಟಪ, ಹಾಸ್ಟೆಲ್, ಸಭಾಭವನಗಳನ್ನು ತಾತ್ಕಾಲಿಕ ಆಸ್ಪತ್ರೆಗಳಾಗಿ ಮಾರ್ಪಾಟು ಸೇರಿದಂತೆ ಹಲವು ಸಲಹೆಗಳನ್ನು ನೀಡಿದ್ದಾರೆ.
* ಜಿಲ್ಲಾವಾರು ಆಕ್ಸಿಜನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ