ಪ್ರಗತಿವಾಹಿನಿ ಸುದ್ದಿ: 40 ವರ್ಷಗಳ ತನ್ನ ರಾಜಕೀಯ ಜೀವನ ತೆರೆದ ಪುಸ್ತಕ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಅವರು ಇಂದು ಮುಡಾ ಹಗರಣದಲ್ಲಿ ತನ್ನದೇ ಕೈಕೆಳಗಿನ ಅಧಿಕಾರಿಯಿಂದ ವಿಚಾರಣೆ ಎದುರುಸುತ್ತಿದ್ದಾರೆ ಇದನ್ನು ನೋಡಿದರೆ ನಮಗೇ ನಾಚಿಕೆಯಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಕಳೆದ 16 ತಿಂಗಳಿಂದ ಕರ್ನಾಟಕದ ಜನ ಇವರ ಪುಸ್ತಕವನ್ನು ತೆರೆದು ತೆರೆದು ನೋಡುತ್ತಿದ್ದಾರೆ. ಅಭಿವೃದ್ಧಿ ಮಾತ್ರ ಕಾಣುತ್ತಿಲ್ಲ. ಸರ್ಕಾರದಲ್ಲಿ ಪ್ರತಿ ದಿನ ಒಬ್ಬೊಬ್ಬ ಸಚಿವರು ಲೂಟಿ ಮಾಡುವುದರಲ್ಲೇ ತೊಡಗಿದ್ದಾರೆ ಎಂದು ಆರೋಪಿಸಿದರು.
ಲೋಕಾಯುಕ್ತ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಮ್ಯಾಚ್ ಫಿಕ್ಸಿಂಗ್ ಆದಂತಿದೆ. ಇನ್ನು ಪಾರದರ್ಶಕ ತನಿಖೆ ನಂಬುಲು ಹೇಗೆ ಸಾಧ್ಯ? ಲೋಕಾಯುಕ್ತ ವಿಚಾರಣೆಗೆ ಹಾಜರಾಗುವ ಮುನ್ನವೇ ಸಿಎಂ ಸಿದ್ದರಾಮಯ್ಯ ಬೆಳಿಗ್ಗೆ ವಿಚಾರಣೆಗೆ ಹಾಜರಾಗುತ್ತೇನೆ. ಮಧ್ಯಾಹ್ನ ಚನ್ನಪಟ್ಟಣ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ. ಅಂದ್ರೆ ಇದೇನು ಮ್ಯಾಚ್ ಫಿಕ್ಸಿಂಗಾ? ತನಿಖಾಧಿಕರಿಗಳು ವಿಚಾರಣೆ ಎಷ್ಟು ಹೊತ್ತು ನಡೆಸುತ್ತಾರೆ ಎಂದು ಮೊದಲೇ ಗೊತ್ತಾ? ಇವರೇ ಲೋಕಾಯುಕ್ತ ವಿಚಾರಣೆಗೆ ಸಮಯ ನಿಗದಿ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ