Kannada NewsKarnataka NewsLatestPolitics

*’ಸಿದ್ದನಾಮಿಕ್ಸ್’ ಎಂಬ HDK ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್*

ಪ್ರಗತಿವಾಹಿನಿ ಸುದ್ದಿ: ಸದನದಲ್ಲಿ ಸಿದ್ದನಾಮಿಕ್ಸ್ ಎಂಬ ಮಾಜಿ ಸಿಎಂ ಹೆಚ್ ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಸರ್ವರನ್ನೂ ಒಳಗೊಂಡಿರುವ, ಸರ್ವರನ್ನೂ ಬೆಸೆಯುವ ಮತ್ತು ಸರ್ವರಿಗೂ ಸಮಪಾಲು – ಸಮಬಾಳು ನೀಡುವುದನ್ನೇ ಗುರಿಯಾಗಿಟ್ಟುಕೊಂಡ ಸರ್ವೋದಯ ಅಭಿವೃದ್ದಿ ಮಾದರಿಯೇ ಸಿದ್ ಎಕನಾಮಿಕ್ಸ್ ಎಂದು ಟಾಂಗ್ ನೀಡಿದ್ದಾರೆ.

Home add -Advt

ಬಹುಧರ್ಮ, ಬಹುಸಂಸ್ಕೃತಿ ಮತ್ತು ಬಹುಭಾಷೆಗಳನ್ನೊಳಗೊಂಡ ಬಹುತ್ವವನ್ನು ಗೌರವಿಸುವ ಅಭಿವೃದ್ಧಿ ಮಾದರಿಯೇ ಸಿದ್ ಎಕನಾಮಿಕ್ಸ್. ಕಾಯಕದ ಮಹತ್ವವನ್ನು ವಿಶ್ವಕ್ಕೆ ಸಾರಿದ ಬಸವಣ್ಣ, ಗ್ರಾಮಸ್ವರಾಜ್ಯದ ಹರಿಕಾರ ಮಹಾತ್ಮ ಗಾಂಧೀಜಿ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪನೆಯ ಎಚ್ಚರಿಕೆಯ ಸಂದೇಶ ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳ ಮೂಸೆಯಿಂದ ರೂಪುಗೊಂಡ ಅಭಿವೃದ್ಧಿ ಮಾದರಿಯೇ ಸಿದ್ ಎಕನಾಮಿಕ್ಸ್ ಎಂದಿದ್ದಾರೆ.

ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಮತ್ತು ಎಲ್ಲ ಜಾತಿ-ಧರ್ಮಗಳ ಬಡವರ ಜೊತೆಗಿನ ಒಡನಾಟದ ಅನುಭವದ ಮೂಲಕ ರೂಪುಗೊಂಡ ಅಭಿವೃದ್ಧಿ ಮಾದರಿಯೇ ಸಿದ್ ಎಕನಾಮಿಕ್ಸ್.

ಜನರ ಬೆವರಗಳಿಕೆಯ ತೆರಿಗೆ ಹಣದ ಪೈಸೆ ಪೈಸೆ ಕೂಡಾ ಆ ಜನರ ಕಲ್ಯಾಣಕ್ಕಾಗಿಯೇ ವಿನಿಯೋಗವಾಗಬೇಕು ಎನ್ನುವ ಎಚ್ಚರ ಮತ್ತು ನುಡಿದಂತೆ ನಡೆಯುವ ಬದ್ಧತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಒಳಗೊಂಡ ಅಭಿವೃದ್ಧಿ ಮಾದರಿಯೇ ಸಿದ್ ಎಕನಾಮಿಕ್ಸ್ ಎಂದು ತಿರುಗೇಟು ನೀಡಿದ್ದಾರೆ.

Related Articles

Back to top button