Latest

*ಕೂಡಲಸಂಗಮ, ಗೋಕರ್ಣದಲ್ಲಿ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ*

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಶತಮಾನದ ಸಂತ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ವಿಶ್ವಗುರು ಬಸವಣ್ಣನವರ ಐಕ್ಯ ಸ್ಥಳ ತ್ರಿವೇಣಿ ನದಿಗಳ ಸಂಗಮ ಕೂಡಲಸಂಗಮದಲ್ಲಿ ವಿಸರ್ಜಿಸಲಾಯಿತು.

ಇಂದು ಮುಂಜಾನೆ ಕೂಡಲಸಂಗಮಕ್ಕೆ ಆಗಮಿಸಿದ ಜ್ಞಾನಯೋಗಾಶ್ರಮದ ಅಧ್ಯಕ್ಷರೂ ಆಗಿರುವ ಬಸವಾನಂದ ಸ್ವಾಮೀಜಿ ನೇತೃತ್ವದಲ್ಲಿ ಹಲವು ಸ್ವಾಮೀಜಿಗಳು, ಚಿತಾಭಸ್ಮವಿದ್ದ ಮಡಿಕೆಗೆ ಪೂಜೆ ಸಲ್ಲಿಸಿದರು. ಬಳಿಕ ಹೂವಿನ ಹಾರ, ಬಾಳೆ ದಿಂಡಿನಿಮ್ದ ವಿಶೇಷ ಅಲಂಕಾರ ಮಾಡಿದ್ದ ಬೋಟ್ ನಲ್ಲಿ ಕೂಡಲಸಂಗಮದ ನದಿ ಮಧ್ಯಕ್ಕೆ ತೆರಳಿ ಘಟಪ್ರಭೆ, ಮಲಪ್ರಭೆ ಹಾಗೂ ಕೃಷ್ಣೆ ನದಿ ಸಂಗಮದಲ್ಲಿ ಚಿತಾ ಭಸ್ಮ ವಿಸರ್ಜಿಸಿದರು.

Home add -Advt

ಈ ವೇಳೆ ಸಿದ್ದೇಶ್ವರ ಶ್ರೀಗಳ ಸಾವಿರಾರು ಭಕ್ತರು ಕೂಡಲಸಂಗಮದಲ್ಲಿ ನೆರೆದಿದ್ದರು. ಬಳಿಕ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಸಮುದ್ರದಲ್ಲಿಯೂ ಇಂದು ಸಂಜೆ ಸಾವಿರಾರು ಭಕ್ತರ ಸಮುಖದಲ್ಲಿ ಸಿದ್ದೇಶ್ವರ ಶ್ರೀಗಳ ಚಿತಾ ಭಸ್ಮವನ್ನು ವಿಸರ್ಜಿಸಲಾಯಿತು.

*ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಯಾವ ಮಟ್ಟಕ್ಕೆ ಇಳಿದಿದೆ; ಜನರೆ ತಕ್ಕ ಪಾಠ ಕಲಿಸುತ್ತಾರೆ: ಡಿ.ಕೆ.ಶಿವಕುಮಾರ್*

https://pragati.taskdun.com/d-k-shivakumarreactionbjp-govt/

Related Articles

Back to top button