Latest

*ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಯಾವ ಮಟ್ಟಕ್ಕೆ ಇಳಿದಿದೆ; ಜನರೆ ತಕ್ಕ ಪಾಠ ಕಲಿಸುತ್ತಾರೆ: ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಪಕ್ಷ ಭಾವನೆಗಿಂತ ಬದುಕಿನ ವಿಚಾರದ ಬಗ್ಗೆ ಹೆಚ್ಚು ಗಮನಹರಿಸುತ್ತದೆ. ಜನರ ಬದುಕು ಕಟ್ಟಿಕೊಡಲು ಮುಂದೆ ಏನು ಮಾಡುತ್ತೇವೆ ಎಂಬುದು ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾಧ್ಯಗಳೊಂದಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ರಾಜ್ಯದ ಬಿಜೆಪಿ ಸರ್ಕಾರ ಯಾವ ಮಟ್ಟಿಗೆ ಭ್ರಷ್ಟವಾಗಿದೆ ಎಂಬುದು ಜನರ ಮುಂದೆ ಇದೆ. ಈಗ ಜನರೇ ತೀರ್ಮಾನ ಮಾಡಿ ತಕ್ಕ ಪಾಠ ಕಲಿಸುತ್ತಾರೆ ಎಂದರು.

Home add -Advt

ಸಂಕ್ರಾಂತಿ ವೇಳೆಗೆ ಬಿಜೆಪಿ ಸಚಿವರ ಸಿಡಿ ಬಿಡುಗಡೆ ಕುರಿತ ಪ್ರಶ್ನೆಗೆ, ‘ಬಿಜೆಪಿಯ ಮುತ್ತು ರತ್ನಗಳ ಬಗ್ಗೆ ನಾನು ಈಗ ಏನನ್ನೂ ಮಾತನಾಡುವುದಿಲ್ಲ. ಆ ಮುತ್ತು ರತ್ನಗಳನ್ನು ಬಿಜೆಪಿ ಅವರೇ ಇಟ್ಟುಕೊಳ್ಳಲಿ’ ಎಂದು ಛೇಡಿಸಿದರು.

*ಗೃಹ ಸಚಿವರ ಮನೆಯಲ್ಲಿ ಸ್ಯಾಂಟ್ರೋ ರವಿಯಿಂದ ಕಂತೆ ಕಂತೆ ಹಣ ಎಣಿಕೆ; ಹೊಸ ಬಾಂಬ್ ಸಿಡಿಸಿದ HDK*

https://pragati.taskdun.com/h-d-kumaraswamysantro-raviaraga-jnanendra/

Related Articles

Back to top button