Latest

ಸಿದ್ಧಾರ್ಥ್ ಹತ್ಯೆ ಪ್ರಕರಣ; ಮಲತಾಯಿ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಸಂಬಂಧಿ ಸಿದ್ಧಾರ್ಥ್ ಅಪಹರಣ ಹಾಗೂ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸಿದ್ಧಾರ್ಥ್ ಮಲತಾಯಿ ಇಂದು ಚೌವ್ಹಾಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಿದ್ಧಾರ್ಥ್ ಹತ್ಯೆ ಪ್ರಕರಣಕ್ಕೆ ಭೂ ವಿವಾದ ಕಾರಣ ಎನ್ನಲಾಗಿದ್ದು, ಇದರ ಹಿಂದೆ ಸಿದ್ಧಾರ್ಥ್ ಮಲತಾಯಿ ಕೈವಾಡದ ಶಂಕೆ ಇದೆ. ಮಲತಾಯಿ ಇಂದು ಸುಪಾರಿ ನೀಡಿ ಸಿದ್ಧಾರ್ಥ್ ನನ್ನು ಹತ್ಯೆ ಮಾಡಿಸಿದ್ದಾರೆ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ.

Home add -Advt

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಸಿದ್ಧಾರ್ಥ್ ಮಲತಾಯಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Related Articles

Back to top button