Karnataka News

*ತಾಯಿಯನ್ನೆ ಹತ್ಯೆಗೈದ ಮಗ*

ಪ್ರಗತಿವಾಹಿನಿ ಸುದ್ದಿ: ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಹೆತ್ತ ತಾಯಿಯನ್ನೇ ಮಗ ಕೊಲೆ ಮಾಡಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ.

ಮಗ ಸ್ವಾಮಿ (40) ಎಂಬಾತ ತಾಯಿ ಜಯಮ್ಮ (60) ಅವರನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಗಂಡನಿಗೆ ಹುಷಾರಿಲ್ಲದ ಕಾರಣ ಜಯಮ್ಮ ಮನೆಯಲ್ಲಿದ್ದ ಜಾನುವಾರು ಮಾರಾಟ ಮಾಡಿದ್ದು, ಅದರಲ್ಲಿ 90 ಸಾವಿರ ಹಣ ಬಂದಿತ್ತು. ಇದೇ ಹಣ ನೀಡುವಂತೆ ಮಗ ಪದೇ ಪದೇ ಪೀಡಿಸುತ್ತಿದ್ದ.

ಅತ್ತ ತಂದೆ ಆಸ್ಪತ್ರೆಗೆ ತೆರಳಿದ ವೇಳೆ ಇತ್ತ ಮಗ ಹಣಕ್ಕಾಗಿ ಪೀಡಿಸಿ ತಾಯಿ ಹಣ ನೀಡದ ಕಾರಣ ಹೆತ್ತ ತಾಯಿಯನ್ನೇ ಕೈಯಿಂದ ಹೊಡೆದು ಕೊಲೆ ಮಾಡಿದ್ದಾನೆ ಬೈಲುಕುಪ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಜಯಮ್ಮರ ಮೃತದೇಹವನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ತರಲಾಗಿದ್ದು, ಮಡಿಕೇರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button