*ಸಿರಿಗನ್ನಡ ಗೌರವ ಮತ್ತು ವಿವಿಧ ದತ್ತಿ ಪ್ರಶಸ್ತಿಗಳು ಪ್ರಕಟ*
ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ (ಟ್ರಸ್ಟ್)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ೨೦೨೪ ನೇ ಸಾಲಿನ ಸಿರಿಗನ್ನಡ ಗೌರವ ಹಾಗು ವಿವಿಧ ಜೀವಮಾನ ಸಾಧನೆ ಪ್ರಶಸ್ತಿಗಳು ಮತ್ತು ೨೦೨೩ ನೇ ಸಾಲಿನ ಸಿರಿಗನ್ನಡ ಪುಸ್ತಕ ಪ್ರಶಸ್ತಿ, ವಿವಿಧ ದತ್ತಿ ಪುಸ್ತಕ ಪ್ರಶಸ್ತಿಗಳು ಪ್ರಕಟಗೊಂಡಿವೆ.
೨೦೨೪ನೇ ಸಾಲಿನ ಸಿರಿಗನ್ನಡ ಗೌರವಕ್ಕೆ ಹಿರಿಯ ಲೇಖಕರಾದ ಜಯಂತ ಜೋಶಿ ಮತ್ತು ಆಯ್ ಆರ್ ಮಠಪತಿ ಭಾಜನರಾಗಿದ್ದಾರೆ.
೨೦೨೩ ನೆಯ ಸಾಲಿನ ಸಿರಿಗನ್ನಡ ಪುಸ್ತಕ ಪ್ರಸಸ್ತಿಗೆ ಸಂತೋಷ ನಾಯಿಕ ಅವರ ಹೊಸ ವಿಳಾಸದ ಹೆಜ್ಜೆಗಳು ಕವನ ಸಂಕಲನ ಮತ್ತು ಬಾಳಣ್ಣ ಶೀಗಿಹಳ್ಳಿ ಅವರ ಮುಡಿವ ಭೋಗಿಗಳಿಗೆ ವಿಮರ್ಶೆ ಕ್ರತಿ ಆಯ್ಕೆಗೊಂಡಿದೆ.
೨೦೨೪ ನೇ ಸಾಲಿನ ವಿವಿಧ ದತ್ತಿ ಜೀವಮಾನ ಸಾಧನೆ ಪ್ರಶಸ್ತಿಗಳು:
ಪ್ರೋ. ಪ್ರಲ್ಹಾದಕುಮಾರ ಬಾಗೋಜಿ ದತ್ತಿ ಪ್ರಶಸ್ತಿ ಜಿಲ್ಲೆಯ ಪ್ರತಿಭಾವಂತ ಸಾಹಿತಿಗೆ ಜೀವಮಾನ ಸಾಧನೆಗಾಗಿ ಪ್ರಾಣನಾಥಾಚಾರ್ಯ ಪಾಂಗ್ರಿ, ಡಾ ಲತಾ ಗುತ್ತಿ ದತ್ತಿ ನಿಧಿ ಪ್ರಶಸ್ತಿ ಲೇಖಕಿಯರ ಜೀವಮಾನ ಸಾಧನೆಗಾಗಿ ಉಮಾ ಕುಲಕರ್ಣಿ, ದಿ ಸುಮನ ಗುರುನಾಥ ಹುದಲಿ ದತ್ತಿ ಪ್ರಶಸ್ತಿ ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹಿಳೆಗೆ ಶಾಂತಾ ಆಚಾರ್ಯ, ದಿ ವೆಂ ಲ ಜೋಶಿ ಸ್ಮಾರಕ ದತ್ತಿ ಪ್ರಶಸ್ತಿ ಜಿಲ್ಲೆಯ ಶ್ರೇಷ್ಠ ಶಿಕ್ಷಕ ಸಾಹಿತಿಗೆ ಈಶ್ವರ ಮಮದಾಪುರ, ತಾರಾಮತಿ ಪರ್ವತರಾಜ ಪಾಟೀಲ ದತ್ತಿ ಪ್ರಶಸ್ತಿ ಜಿಲ್ಲೆಯ ಉತ್ತಮ ಪ್ರಕಾಶಕರಿಗೆ ಸಿರಿಗನ್ನಡ ಬಳಗ (ಡಾ ದಯಾನಂದ ನೂಲಿ), ಸಂಗೀತ ಪ್ರತಿಷ್ಠಾನ ಬೆಳಗಾವಿ ದತ್ತಿ ಪ್ರಶಸ್ತಿ ವೇಣುನಾದ ಪ್ರಶಸ್ತಿ ಸಂಗೀತ ಸಾಧಕರಿಗೆ ಶ್ರೀಮತಿ ಮಂಜುಳ ಜೋಶಿ, ರಾಮಚಂದ್ರಪ್ಪ ಹಾಗೂ ಶ್ರೀಯುತ ಷನ್ಮುಖಪ್ಪ ಗೊಣಬಾಳ ಇವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ವೈಚಾರಿಕ ಸಂಪನ್ಮೂಲ ವ್ಯಕ್ತಿಗಳಿಗೆ ಬಿ ಎಸ್ ಗವಿಮಠ, ಡಾ ಸಿ ಕೆ ನಾವಲಗಿ ದತ್ತಿ ನಿಧಿ ಪ್ರಶಸ್ತಿ ಜನಪದ ಕಲಾವಿದರಿಗೆ ಈಶ್ವರಚಂದ್ರ ಬೆಟಗೇರಿ ಇವರು ಆಯ್ಕೆಯಾಗಿರುತ್ತಾರೆ.
ವಿವಿಧ ಪುಸ್ತಕ ದತ್ತಿ ಪ್ರಶಸ್ತಿಗಳು:
ಕೆ ಚಂದ್ರಮೌಳಿ ದತ್ತಿ ಪ್ರಶಸ್ತಿಗೆ ಗುಂಡೇನಟ್ಟಿ ಮಧುಕರ ಅವರ ಹಾಸ್ಯ ಸಾಹಿತ್ಯ ಮೋದಿಗೊಂದು ಬಹಿರಂಗ ಪತ್ರ, ಪಿ ವಿಜಯಕುಮಾರ ದತ್ತಿ ಪ್ರಶಸ್ತಿಗೆ ಡಾ ಗುರದೇವಿ ಹುಲೆಪ್ಪನವರಮಠ ಅವರ ಮಕ್ಕಳ ಸಾಹಿತ್ಯ ಬೆಳಗು ಜಗವ ಮಗು ಕೃತಿ, ದಿ ಶ್ರೀದೇವಿ ದಾಸಪ್ಪ ಶಾನಭಾಗ ದತ್ತಿ ಪ್ರಶಸ್ತಿಗೆ ರಂಜನಾ ನಾಯಿಕ ಅವರ ಅನುವಾದ ಕೃತಿ ಕನಸಿನಿಂದ ಹಸೆಮಣೆಯವರೆಗೆ, ದಿ ಹಣಮಂತರಾವ್ ಸವಣೂರ ಸ್ಮಾರಕದತ್ತಿ ಪ್ರಶಸ್ತಿಗೆ ಪಾರ್ವತಿ ಪಿಟಗಿ ಅವರ ಕಾದಂಬರಿ ಚಂದ್ರಯಾನ ಕೃತಿ, ಎಸ್ ಎಮ್ ಕುಲಕರ್ಣಿ ಷಷ್ಟ್ಯಬ್ಧಿ ಸಮಿತಿ ದತ್ತಿ ಪ್ರಶಸ್ತಿಗೆ ಡಾ ಗುರುಪಾದ ಮರಿಗುದ್ದಿ ಅವರ ವಿಮರ್ಶಾ ಕೃತಿ ಡಾ ರಾಗೌ ಸಾಹಿತ್ಯ ಮಂಥನ, ದಿ ಚಂದ್ರವ್ವ ಧರ್ಮಾಜಿ ಅನಗೋಳ ದತ್ತಿ ಪ್ರಶಸ್ತಿಗೆ ಶ್ವೇತಾ ನರಗುಂದ ಅವರ ಕತೆಗಳು ಆಯಾಮ ಕೃತಿ, ಶಿವಕವಿ ಉಳವೀಶ ಹುಲೆಪ್ಪನವರಮಠ ದತ್ತಿ ಪ್ರಶಸ್ತಿಗೆ ಮಾಲಾ ಅಕ್ಕಿಶೆಟ್ಟಿ ಅವರ ವೈಚಾರಿಕ ಕೃತಿ ಸ್ವಾವಲಂಭಿ ಬುದುಕಿನಾಚೆ, ದಿ ಭಾರತಿಬಾಯಿ ಬಾಳಕೃಷ್ಣ ಜೋಶಿ ಸ್ಮರಣಾರ್ಥ ದತ್ತಿ ಪ್ರಶಸ್ತಿ ಜೀವನ ಚರಿತ್ರೆಗೆ ಎಲ್ ಎಸ್ ಶಾಸ್ತ್ರಿ ಅವರ ಕನ್ನಡದ ಭಾಗ್ಯ ಕೃತಿ, ವಿ ಆರ್ ಗುಡಿ ದತ್ತಿ ಪ್ರಶಸ್ತಿ ಅತ್ಯುತ್ತಮ ಆಧ್ಯಾತ್ಮಿಕ ಕೃತಿಗೆ ದೀಪಿಕಾ ಚಾಟೆ ಅವರ ಶ್ರೀ ರಾಮಚಂದ್ರ ಚರಿತೆ ಮತ್ತು ದಿ ರಾಮರಾವ್ ಶಿರಹಟ್ಟಿ ದತ್ತಿ ಪ್ರಶಸ್ತಿ ಲೇಖಕರ ಉತ್ತಮ ಪ್ರಥಮ ಕೃತಿಗೆ ಇಂದಿರಾ ಹೋಳಕರ ಅವರ ಮಿಂಚು ಮಿಂಚೈತಿ ಆಯ್ಕೆಯಾಗಿವೆ.
ಪ್ರಶಸ್ತಿಯನ್ನು ಡಿಸೆಂಬರ್ ೨೫ ರಂದು ನಡೆಯುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ನೀರಜಾ ಗಣಾಚಾರಿ ತಿಳಿಸಿದ್ದಾರೆ. ಎಲ್ಲ ಪ್ರಶಸ್ತಿ ವಿಜೇತರಿಗೆ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್ ಎಮ್ ಕುಲಕರ್ಣಿ ಅಭಿನಂದನೆ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ