ಪ್ರಗತಿವಾಹಿನಿ ಸುದ್ದಿ, ಶಿರಸಿ – ಶಿರಸಿಯಲ್ಲಿ ಕಳೆದ ವರ್ಷ ದಾಖಲಾಗಿದ್ದ ಫೋಕ್ಸೋ ಪ್ರಕರಣದಲ್ಲಿ ಆರೋಪಿಗೆ 20 ವರ್ಷ ಶಿಕ್ಷೆ ಹಾಗೂ 77 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ: 06-05-2021 ರಂದು
ಬಾಲಕಿ ನೀಡಿದ ದೂರನ್ನು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ( ಪ್ರಕರಣ ನಂ 24/2021 ಕಲಂ:
341, 376(2) (ಈ), 506 ಐ.ಪಿ.ಸಿ ಮತ್ತು ಕಲಂ 4. 6) ಪೋಕ್ಸೋ ಕಾಯ್ದೆ-2012 ಅಡಿ ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಅರೋಪಿ ಗುಲಾಬಚಂದ ಚೀಮಾಲಾಲ್ ಶಾಹ (ಪ್ರಾಯ:
37 ವರ್ಷ, ಸಾ: ಯಾದಗಿರಿ, ಹಾಲಿ: ಶಿರಸಿ) ತನ್ನ ಸಾಕು ಮಗಳಾದ ಅಪ್ರಾಪ್ತ
ಬಾಲಕಿಯನ್ನು ಅತ್ಯಾಚಾರ ಮಾಡಿದ್ದ. ದಿನಾಂಕ: 06-05-2021 ರಂದು ಆತನನ್ನು ಬಂಧಿಸಿ
ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಕೃತ್ಯ ಎಸಗಿದ ಬಗ್ಗೆ ತನಿಖೆಯಲ್ಲಿ
ಸಾಬೀತಾಗಿದ್ದರಿಂದ ಅರೋಪಿತನ ವಿರುದ್ದ ದಿನಾಂಕ: 24-06-2021 ರಂದು ತನಿಖಾಧಿಕಾರಿಯಾದ
ರಾಮಚಂದ್ರ ನಾಯಕ (ಸಿ.ಪಿ.ಐ ಶಿರಸಿ ವೃತ್ತ) ನ್ಯಾಯಾಲಯಕ್ಕೆ ಒಟ್ಟು 216
ಪುಟಗಳ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆ ನಡೆದು ದಿನಾಂಕ: 25-01-2022 ರಂದು ನ್ಯಾಯಾಧೀಶರಾದ ಶಿವಾಜಿ ಅನಂತ ನಲ್ವಾಡಿ (ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮತ್ತು ಎಫ್.ಟಿ.ಎಸ್.ಸಿ-1 ಮಕ್ಕಳ
ನ್ಯಾಯಾಲಯ ಕಾರವಾರ) ಸುಧೀರ್ಘ ವಿಚಾರಣೆ ನಡೆಸಿ ತೀರ್ಪು ನೀಡಿದರು.
ಒಟ್ಟು 77500/- ರೂ ದಂಡ ಹಾಗೂ 20 ವರ್ಷ ಕಠಿಣ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ.
ಈ ಪ್ರಕರಣ ದಾಖಲಾಗಿ 9 ತಿಂಗಳೊಳಗೆ ಶಿಕ್ಷೆ ಪ್ರಕಟವಾಗಿದೆ. ಆರೋಪಿತನ ವಿರುದ್ದ
ದೋಷಾರೋಪಣೆ ಪಟ್ಟಿ ಸಲ್ಲಿಸಿ ಶಿಕ್ಷೆ ವಿಧಿಸುವಲ್ಲಿ ಶ್ರಮಿಸಿದ ತನಿಖಾಧಿಕಾರಿ ರಾಮಚಂದ್ರ ನಾಯಕ
ಮತ್ತು ವಿಶೇಷ ಸರ್ಕಾರಿ ಅಭಿಯೋಜಕರಾದ ಸುಭಾಷ ಪಿ ಕೈರನ್ ರವರ ಕಾರ್ಯಕ್ಕೆ
ಪೊಲೀಸ್ ಅಧೀಕ್ಷಕರಾದ ಡಾ: ಸುಮನ್ ಡಿ ಪೆನ್ನೇಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ