ಪ್ರಗತಿವಾಹಿನಿ ಸುದ್ದಿ: ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್ 19ರಿಂದ ಆರಂಭವಾಗಲಿದೆ. 9 ದಿನಗಳ ಕಾಲ ವೈಭವದ ಜಾತ್ರಾ ಮಹೋಸವ ನಡೆಯಲಿದೆ.
ಮಾರ್ಚ್ 19ರಿಂದ 27ರವರೆಗೆ ಮಾರಿಕಾಂಬಾ ದೇವಿ ಜಾತ್ರೆ ನಡೆಯಲಿದೆ. ಜನವರಿ 31ರಂದು ಶ್ರೀದೇವಿಯ ಪ್ರತಿಷ್ಠಾ ಮಂಟಪ ಕಳಚುವುದು, ಫೆಬ್ರವರಿ 27ರಂದು ಮೊದಲನೆ ಹೊರಬೀಡು, ಮಾರ್ಚ್ 1, 5, 8ರಂದು ಎರಡು, ಮೂರು, ನಾಲ್ಕನೇ ಹೊರಬೀಡು, ಮಾರ್ಚ್ 8ರಂದು ರಥದ ವೃಕ್ಷಪೂಜೆ ಮಾರ್ಚ್ 12ರಂದು ರಧದ ಮರ ತರುವುದು ಹಾಗೂ ಅಂಕೆಯ ಹೊರಬೀಡು, ಮಾರ್ಚ್ 13ರಂದು ಅಂಕೆ ಹಾಕುವುದು, ಶ್ರೀದೇವಿಯ ವಿಸರ್ಜನೆ, ಮಾ.19ರಂದು ಶ್ರೀದೇವಿಯ ರಥದ ಕಳಸದ ಪ್ರತಿಷ್ಠೆ, ಶ್ರೀದೇವಿಯ ಕಲ್ಯಾಣ ಪ್ರತಿಷ್ಠೆ ಮಾ.20ರಂದು ಶ್ರೀದೇವಿಯ ರಥೋತ್ಸವ, ಶೋಭಾಯಾತ್ರೆ, ಜಾತ್ರಾ ಗದ್ದುಗೆಯ ಮೇಲೆ ಶ್ರೀದೇವಿಯ ಪ್ರತಿಷ್ಠೆ, ಮಾ.21 ರಿಂದ ಜಾತ್ರಾ ಗದ್ದುಗೆಯಲ್ಲಿ ಶ್ರೀದೇವಿಗೆ ಸೇವೆ ಸ್ವೀಕಾರ ಮಾ.27ರಂದು ಜಾತ್ರಾ ಮುಕ್ತಾಯ ನಡೆಯಲಿದೆ.
ಏಪ್ರಿಲ್ 9ರಂದು ಶಿರಸಿ ಶ್ರೀದೇವಿ ಮಾರಿಕಾಂಗಾ ದೇವಸ್ಥಾನದಲ್ಲಿ ಯುಗಾದಿ ಪ್ರತಿಷ್ಠೆ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ