Latest

ವಿಮಾ ಮೊತ್ತ ಪಾವತಿಗೆ ಇರುವ ಗಡವು, ಪರಿಹಾರ ಕೊಡಲು ಏಕಿಲ್ಲ? ಶಿರಸಿ ರೈತರ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಸಹಕಾರಿ ಸಂಸ್ಥೆಗಳ ಮೂಲಕ ‌ಕಟ್ಟಲಾದ ಅಡಿಕೆ, ಕಾಳು ಮೆಣಸು ಸೇರಿದಂತೆ ಇತರ ತೋಟಗಾರಿಕಾ ಬೆಳೆಗಳ ವಿಮಾ‌‌ ಪರಿಹಾರ ಮೊತ್ತ ನಿಗದಿಯಾದ ದಿನ‌ ಮುಗಿದರೂ ಬಂದಿಲ್ಲ ಎಂದು ಸಹಕಾರಿಗಳು, ರೈತರು ಅಸಮಧಾ‌ನ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆದಿದೆ.

ತಾಲೂಕಿನ ವಿವಿಧಡೆಯ ರೈತರು ಜಿಲ್ಲಾ‌ ತೋಟಗಾರಿಕಾ ಕಚೇರಿಗೆ ತೆರಳಿ ಮನವಿ‌ ಸಲ್ಲಿಸಿ ತಕ್ಷಣ ಬೆಳೆ ಹಾನಿ ನೀಡಬೇಕು ಎಂದು‌ ಜಿಲ್ಲಾ ಉಪ ನಿರ್ದೇಶಕ ಡಾ.ಪಿ.ಬಿ.ಸತೀಶ ಅವರಲ್ಲಿ ಒತ್ತಾಯಿಸಿದರು.

ಕಳೆದ 2020ರ ಜೂನ್ 30ಕ್ಕೆ ಸಹಕಾರಿ ಸಂಘಗಳ‌ ಮೂಲಕ ರೈತರು ಸರಕಾರ ಸೂಚಿಸಿದ ವಿಮಾ ಕಂಪನಿಗೆ ವಿಮಾ ಹಣ ಭರಣ ಮಾಡಿದ್ದರು‌. ಸರಕಾರದ ನಿಬಂಧನೆಯ‌ ಪ್ರಕಾರ ಅವಧಿ ಮುಗಿದ 45ದಿನಗಳಲ್ಲಿ ಬಿದ್ದ‌ ಮಳೆ ಹಾಗೂ ತೇವಾಂಶ ಆಧರಿಸಿ ಹಿಂಗಾರು, ಮುಂಗಾರು ಅವಧಿಯ ಪರಿಹಾರ ಹಣ ಕೊಡಬೇಕಿತ್ತು. ಈ ಅವಧಿ ಆಗಸ್ಟ್ 15 ಆಗಿತ್ತು ಎಂದು ರೈತರು ವಿವರಿಸಿದರು.

ಆದರೆ, ಈಗಾಗಲೇ ವಿಮಾ ಹಣ ಮೊತ್ತಕ್ಕೆ ಒಂದುವರೆ ತಿಂಗಳು ವಿಳಂಬವಾಗಿದೆ. ಇದರಿಂದ ಬೆಳೆಗಾರರಿಗೆ ನಷ್ಟ, ಈ ಪರಿಹಾರ ಬಾರದು ಎಂಬ ಗುಮಾನಿ ಕೂಡ ವ್ಯಕ್ತವಾಗಿದೆ ಎಂದು ರೈತರು ಆತಂಕಿಸಿದರು.

Home add -Advt

ಜಿಲ್ಲೆಯಲ್ಲಿ 39,571ರೈತರು ವಿಮಾ ಪಾವತಿಸಿದ್ದು, 10.86ಕೋಟಿ ರೂ. ಮೊತ್ತವನ್ನು ಅಗ್ರಿಕಲ್ಚರ್ ಇನ್ಸುರೆನ್ಸ ಕಂಪನಿಗೆ 2020 ಜೂನ್ ಅಂತ್ಯಕ್ಕೆ ಪಾವತಿಸಲಾಗಿದೆ. ಆದರೆ, ಈವರೆಗೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಎಂದೂ ಇದೇ ವೇಳೆ ರೈತರು ಆಕ್ಷೇಪಿಸಿದರು.

ವಾರ್ಷಿಕ ಅವಧಿ‌ ಮುಗಿದ‌ ಕೂಡಲೇ ಆಯಾ ಆಯಾ ಪಂಚಾಯತದ ಹಂತದಲ್ಲಾದರೂ ವಿಮಾ ಪರಿಹಾರ‌ದ ಮೊತ್ತ ಘೋಷಿಸಬೇಕು. ಕಂತು ತುಂಬಿಸಿಸಿಕೊಂಡ ವಿಮಾ ಕಂಪನಿಯ ಕಚೇರಿ ಆಗಬೇಕು ಎಂದು ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ವಿನಾಯಕ ಹೆಗಡೆ ಶೀಗೇಹಳ್ಳಿ ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾ ತೋಟಗಾರಿಕಾ ಅಧಿಕಾರಿ ಡಾ.ಪಿ.ಬಿ. ಸತೀಶ, ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ವಿಮಾ ಮೊತ್ತ ಶೀಘ್ರ ಬಿಡುಗಡೆ ಗೊಳಿಸಲು ಪ್ರಯತ್ನ ಮಾಡುವದಾಗಿ ತಿಳಿಸಿದರು.

ಈ ವೇಳೆ ಕೃಷಿಕ ಸಮಾಜದ ರಾಜ್ಯದ ಪ್ರತಿನಿಧಿ ವಿನಾಯಕ ಹೆಗಡೆ ಶೀಗೆಹಳ್ಳಿ, ತಾಲೂಕು ಆತ್ಮ ಘಟಕದ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೆಕೇರಿ, ಕಬ್ನಳ್ಳಿ ಎಂ.ಸಿ.ಹೆಗಡೆ, ನಾಗರಾಜ್ ಹೆಗಡೆ, ಅಶೋಕ ಹೆಗಡೆ, ಬೆಟ್ಟಕೊಪ್ಪದ ರಾಜಶೇಖರ ಹೆಗಡೆ , ಗಣೇಶ ನಾ ಹೆಗಡೆ, ನರಸಿಂಹ ಹೆಗಡೆ, ಎಸ್.ಜಿ.ಹೆಗಡೆ, ಗಣಪತಿ ಮಾ.ಭಟ್ಟ, ದತ್ತಾತ್ರಯ ರಾ . ಹೆಗಡೆ, ರವಿ ಹೆಗಡೆ‌, ಸಣ್ಣ ಕೇರಿಯ ಗಣೇಶ ಹೆಗಡೆ, ಶ್ರೀಧರ ಹೆಗಡೆ, ರಮೇಶ ಹೆಗಡೆ ಕಲ್ಲಕೈ ಇತರರು ಇದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button