Latest

*ಒಬ್ಬನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ 6 ಬಾಲಕರೂ ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ಮದುವೆಗೆಂದು ಬಂದಿದ್ದ ಒಂದೇ ಕುಟುಂಬದ ಬಾಲಕರು, ನದಿಯಲ್ಲಿ ಈಜಲು ಹೋಗಿ ದುರಂತಕ್ಕೀಡಾಗಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಓರ್ವನನ್ನು ರಕ್ಷಿಸಲು ಹೋಗಿ ಆರು ಬಾಲಕರೂ ನೀರು ಪಾಲಾಗಿರುವ ಘಟನೆ ನಡೆದಿದೆ.

Home add -Advt

ತೆಲಂಗಾಣದ ಭೂಪಾಲಪಲ್ಲಿಯ ಮಹದೇವಪುರ ಮಂಡಲದಲ್ಲಿ ಈ ದುರಂತ ಸಂಭವಿಸಿದೆ. ಮದುವೆ ಸಮಾರಂಭಕ್ಕೆಂದು ಬಂದಿದ್ದ ಆರು ಜನ ಅಪ್ರಾಪ್ತ ಬಾಲಕರು ತಮಗೆ ಈಜಲು ಬಾರದಿದ್ದರೂ, ಗೋದಾವರಿನದಿಯಲ್ಲಿ ಈಜಲು ಹೋಗಿದ್ದಾರೆ. ಈ ವೇಳೆ ಏಕಾಏಕಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಓರ್ವ ಬಾಲಕ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಆತನನ್ನು ರಕ್ಷಿಸಲೆಂದು ಒಬ್ಬರ ಹಿಂದೊಂಬ್ಬರಂತೆ ಆತನನ್ನು ಹಿಂಬಾಲಿಸಿದ್ದಾರೆ. ಹೀಗೆ ಹೋದವರು ಆರು ಜನರೂ ನೀರುಪಾಲಾಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಮಧುಸೂಧನ್ (18), ಪಟ್ಟಿ ಶಿವಮನೋಜ್, (15), ತೊಗರಿ ರಕ್ಷಿತ್ (13), ಸಾಗರ್ (16), ಬೊಲ್ಲೆದ್ಲಾ ರಾಮಚರಣ್ (17), ಪಸುಲ ರಾಹುಲ್ (19), ಪಟ್ಟಿ ಶಿವಮಣಿ ಎಂದು ಗುರುತಿಸಲಾಗಿದೆ.

Related Articles

Back to top button