Latest

ಒಂದೇ ಮನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಜನ ಗುಂಡೇಟಿಗೆ ಬಲಿ

ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಅಮೆರಿಕದ ಸೆಕ್ವಾಚಿಯಲ್ಲಿ ಒಂಟಿ ಮನೆಯೊಂದರಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಜನ ಗುಂಡೇಟಿಗೆ ಬಲಿಯಾಗಿದ್ದಾರೆ.

ಒಬ್ಬ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ವೇಳೆ ಇಡೀ ಮನೆಗೆ ಬೆಂಕಿ ಹಚ್ಚಲಾಗಿದ್ದು ಮನೆಯ ಬಹುಭಾಗ ಸುಟ್ಟು ಕರಕಲಾಗಿದೆ.

ಗ್ಯಾರಿ ಬಾರ್ನೆಟ್ ಎಂಬಾತ ಈ ದಾಳಿ ನಡೆಸಿದ್ದಾಗಿ ಪೊಲೀಸರು ಶಂಕಿಸಿದ್ದು ಆತನೊಂದಿಗೆ ಅವನ ಮಾಜಿ ಪತ್ನಿ ರೆಜಿನಾ ಬಾರ್ನೆಟ್ ಕೂಡ ಮೃತಪಟ್ಟಿದ್ದಾಳೆ. ಇದು ದ್ವೇಷದಿಂದ ನಡೆಸಲಾದ ಹಲ್ಲೆಯೋ, ಇಲ್ಲ ಆತ್ಮಹತ್ಯೆ ಯತ್ನದ ಅವಘಡವೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button