Latest
ಬಹುಭಾಷಾ ನಟಿ ಸ್ನೇಹಾಗೆ ಉದ್ಯಮಿಗಳಿಂದ ವಂಚನೆ

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಉದ್ಯಮಿಗಳಿಂದ ಲಕ್ಷಾಂತರ ರೂಪಾಯಿ ವಂಚನೆಗೊಳಗಾಗಿದ್ದಾಗಿ ಬಹುಭಾಷಾ ನಟಿ ಸ್ನೇಹಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಿನಿಮಾಗಳಲ್ಲಿ ಸಂಭಾವನೆ ಪಡೆದ ಹಣವನ್ನು ನಟಿ ಸ್ನೇಹಾ ಇಬ್ಬರು ಉದ್ಯಮಿಗಳ ಬಳಿ ಹೂಡಿಕೆ ಮಾಡಿದ್ದರು. ಆದರೆ ಇದೀಗ ಲಾಭದ ಮೊತ್ತವನ್ನೂ ನೀಡಿತ್ತಿಲ್ಲ. ಪಡೆದ ಹಣವನ್ನೂ ವಾಪಸ್ ಕೊಡುತ್ತಿಲ್ಲ ಎಂದು ಉದ್ಯಮಿಗಳ ವಿರುದ್ಧ ಸ್ನೇಹಾ ಚೆನ್ನೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಟಿ ಸ್ನೇಹಾ, ಕನ್ನಡ ಚಿತ್ರಗಳಲ್ಲೂ ಅಭಿನಯಿಸಿದ್ದು, ಶಾಸ್ತ್ರೀ, ಕುರುಕ್ಷೇತ್ರ, ರವಿಮಾಮ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ವರುಣಾರ್ಭಟಕ್ಕೆ ಕರುನಾಡು ತತ್ತರ; ಐವರು ಬಲಿ




