Latest

ಪಿಕ್ ಪಾಕೆಟ್; ಖ್ಯಾತ ನಟಿ ರೂಪಾ ದತ್ ಬಂಧನ

ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತಾ: ಪಿಕ್ ಪಾಕೆಟಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಾಲಿ ನಟಿ ರೂಪಾ ದತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇಂಟರ್ ನ್ಯಾಷನಲ್ ಕೋಲ್ಕತ್ತಾ ಬುಕ್ ಫೇರ್-2022ರಲ್ಲಿ ಪಿಕ್ ಪಾಕೆಟಿಂಗ್ ಮಾಡಿದ ಆರೋಪದಲ್ಲಿ ನಟಿ ರೂಪಾ ದತ್ ಅವರನ್ನು ಬಿಧಾನ್ ನಗರ ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ನಟಿಯಿಂದ ಸುಮಾರು 75,000 ರೂಪಾಯಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರೂಪಾ ದತ್ ಬೆಂಗಾಲಿ ಧಾರಾವಾಹಿಯ ಜನಪ್ರಿಯ ನಟಿಯಾಗಿದ್ದು, ಈ ಹಿಂದೆ ಬಾಲಿವುಡ್ ನಿರ್ದೇಶಕ, ನಟ ಅನುರಾಗ್ ಕಶ್ಯಪ್ ವಿರುದ್ಧ ಅಶ್ಲೀಲ ಸಂದೇಶ ರವಾನೆ ಆರೋಪ ಮಾಡಿದ್ದರು.

Home add -Advt

ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್
ಆ ದಿನಗಳಿಗಾಗಿ ಮಹಿಳೆಯರಿಗೆ ವಿಶೇಷ ರಜೆ ಘೋಷಣೆ; ದೇಶದ ಗಮನ ಸೆಳೆದ ದಕ್ಷ ಕಾಲೇಜು

Related Articles

Back to top button