ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಹಿರಿಯ ಸಿಪಿಐ ನಾಯಕ ಸೀತಾರಾಮ ಯೆಚೂರಿ ಪುತ್ರ ಆಶಿಶ್ ಕೊರೋನಾಕ್ಕೆ ಬಲಿಯಾಗಿದ್ದಾರೆ.
35 ವರ್ಷದ ಆಶಿಶ್ ಗೆ ಕೊರೋನಾ ದೃಢಪಟ್ಟ ನಂತರ ಗುರುಗ್ರಾಮದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗಿನಜಾವ ಕೊನೆಯುಸಿರೆಳೆದರು.
ನನ್ನ ಹಿರಿಯ ಮಗ ಆಶಿಶ್ ಯೆಚೂರಿಯನ್ನು ನಾನು ಇಂದು ಬೆಳಿಗ್ಗೆ ಕೊರೊನಾದಿಂದಾಗಿ ಕಳೆದುಕೊಂಡೆ ಎಂದು ತಿಳಿಸಲು ಬಹಳ ದುಃಖಿತನಾಗಿದ್ದೇನೆ. ನಮಗೆ ಭರವಸೆ ನೀಡಿದ ಹಾಗೂ ಮಗನಿಗೆ ಚಿಕಿತ್ಸೆ ನೀಡಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸೀತಾರಾಮ ಯೆಚೂರಿ ಟ್ವೀಟ್ ಮಾಡಿದ್ದಾರೆ.
ಅಶಿಶ್ ಯೆಚೂರಿ ದಿನ ಪತ್ರಿಕೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸೀತಾರಂ ಯೆಚೂರಿಗೆ ಸದ್ಯ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.
ಬೆಳಗಾವಿಯಲ್ಲಿ ಮತ್ತೊಮ್ಮೆ ಕೊರೋನಾ ಸ್ಫೋಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ