Kannada NewsKarnataka News

ಸಂಕೇಶ್ವರದಲ್ಲಿ ಹಣಕಾಸಿನ ಜಗಳ; ಬ್ಲೇಡ್ ನಿಂದ ಇಬ್ಬರ ಕತ್ತು ಕೊಯ್ದು ಹಲ್ಲೆ; ಆರೋಪಿ ಬಂಧನ

 ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ: ಹಣಕಾಸಿನ ವಿಚಾರದಲ್ಲಿ ಜಗಳ ನಡೆದು ಇಬ್ಬರು ಯುವಕರ ಕತ್ತನ್ನು ಬ್ಲೇಡ್ ನಿಂದ ಕತ್ತರಿಸಿ ಯುವಕನೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಸಂಕೇಶ್ವರ ನಿವಾಸಿ ದೇವದಾಸ ಪ್ರಕಾಶ ಹುದಲೆ ಹಲ್ಲೆ ನಡೆಸಿದ ಆರೋಪಿ.   ಸಂತೋಷ ಶಂಕರ ವಡ್ಡರ ಹಾಗೂ ಲಕ್ಷ್ಮಣ ಪರಶುರಾಮ ವಡ್ಡರ   ಹಲ್ಲೆಗೊಳಗಾದವರು.  

Home add -Advt

ಆರೋಪಿ ದೇವದಾಸ  ಒಂದು ಸಾವಿರ ರೂ. ಹಣದ ವಿಚಾರವಾಗಿ ಜಗಳ ತೆಗೆದು ಸಂತೋಷ  ಹಾಗೂ  ಲಕ್ಷ್ಮಣಗೆ ಹರಿತವಾದ ಬ್ಲೇಡ್ ನಿಂದ  ಕತ್ತರಿಸಿ ಮಾರಣಾಂತಿಕ ಗಾಯಗೊಳಿಸಿದ್ದಾನೆ.

ಗಾಯಾಳುಗಳು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಈಗಾಗಲೇ ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ.

ಕಾಲೇಜು ವಸತಿ ನಿಲಯದಲ್ಲೇ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

Related Articles

Back to top button