Kannada NewsKarnataka NewsLatest

ಅಥಣಿ ಬಳಿ ಕರಿಮಸೂತಿ ನೀರಾವರಿ ಕಾಲುವೆಗೆ ಬಿದ್ದ ಕಾರು; ಇಬ್ಬರ ಸಾವು

ಪ್ರಗತಿವಾಹಿನಿ ಸುದ್ದಿ, ಅಥಣಿ: ಸಮೀಪದ ರಡ್ಡೇರಹಟ್ಟಿ ಗ್ರಾಮದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ  ಕರಿಮಸೂತಿ ಏತ ನೀರಾವರಿ ಕಾಲುವೆಗೆ ಬಿದ್ದು  ಇಬ್ಬರು ಮೃತಪಟ್ಟಿದ್ದಾರೆ.

Home add -Advt

ರಡ್ಡೇರಹಟ್ಟಿ ಗ್ರಾಮದ ಸುರೇಶ ತುಕಾರಾಮ ಪೂಜಾರಿ (28) ಹಾಗೂ ಮಹಾದೇವ ಶ್ರೀಶೈಲ ಚಿಗರಿ(24) ಮೃತಪಟ್ಟವರು.  ಇಬ್ಬರ ಶವಗಳನ್ನು ಹೊರತೆಗೆಯಲಾಗಿದೆ. ಕಾರಿನಲ್ಲಿದ್ದ ಶ್ರೀಕಾಂತ ನಾಗಪ್ಪ ನಡುವಿನಮನಿ ಅಪಾಯದಿಂದ ಪಾರಾಗಿ ಹೊರಬಂದಿದ್ದಾನೆ.

ಕಾಲುವೆಯಿಂದ ಕಾರನ್ನು ಹೊರತೆಗೆಯಲಾಗಿದ್ದು   ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.

ಅಥಣಿ ಬಳಿ ಕರಿಮಸೂತಿ ನೀರಾವರಿ ಕಾಲುವೆಗೆ ಬಿದ್ದ ಕಾರು; ಇಬ್ಬರ ಸಾವು

Related Articles

Back to top button