
ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಮಧ್ಯ ರೈಲ್ವೆ ಸ್ಪೋರ್ಟ್ಸ್ ಅಸೋಸಿಯೇಷನ್ ಆಯೋಜಿಸಿದ್ದ 47ನೇ ಅಖಿಲ ಭಾರತ ಅಂತರ ರೈಲ್ವೆ ಮಹಿಳಾ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ 2024-25 ಸಿಕಂದರಾಬಾದ್ ನಲ್ಲಿ ನವೆಂಬರ್ 15 ರಿಂದ 19ರವರೆಗೆ ನಡೆಯಿತು.
ಭಾರತೀಯ ರೈಲ್ವೆ ವಲಯಾದ್ಯಂತದ ತಂಡಗಳು ಭಾಗವಹಿಸಿ,ಅಸಾಧಾರಣ ಪ್ರತಿಭೆ ಮತ್ತು ಕ್ರೀಡಾಪಟುತ್ವವನ್ನು ಪ್ರದರ್ಶಿಸಿದವು. ತಂಡದ ನಾಯಕಿ ಅನುಷಾ ಐ.ಪಿ ಮತ್ತು ತರಬೇತುಗಾರ್ತಿ (ಕೋಚ್) ಝರಿನ್ ಪಿ.ಎಸ್ ನೇತೃತ್ವದ ನೈಋತ್ಯ ರೈಲ್ವೆ ಮಹಿಳಾ ಬ್ಯಾಸ್ಕೆಟ್ ಬಾಲ್ ತಂಡ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಪ್ರಭಾವ ಬೀರಿದೆ. ಚಾಂಪಿಯನ್ ಶಿಪ್ ಉದ್ದಕ್ಕೂ ಅವರ ಪ್ರದರ್ಶನವು ಅತ್ಯುತ್ತಮ ಕೌಶಲ್ಯ, ತಂಡದ ಕೆಲಸ ಮತ್ತು ದೃಢನಿಶ್ಚಯವನ್ನು ಪ್ರತಿಬಿಂಬಿಸಿತು.
ಈ ಚಾಂಪಿಯನ್ ಶಿಪ್ ನಲ್ಲಿ ಮೊದಲ ಸ್ಥಾನವನ್ನು ದಕ್ಷಿಣ ಮಧ್ಯ ರೈಲ್ವೆ ಪಡೆದುಕೊಂಡರೆ, ನೈಋತ್ಯ ರೈಲ್ವೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಮೂರನೇ ಸ್ಥಾನವನ್ನು ಮಧ್ಯ ರೈಲ್ವೆ ಪಡೆದುಕೊಂಡಿದೆ.
ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅರವಿಂದ್ ಶ್ರೀವಾಸ್ತವ ಅವರು, ನೈಋತ್ಯ ರೈಲ್ವೆ ತಂಡವನ್ನು ಅವರ ಅತ್ಯುತ್ತಮ ಸಾಧನೆಗಾಗಿ ಅಭಿನಂದಿಸಿದರು. “ನೈಋತ್ಯ ರೈಲ್ವೆ ಮಹಿಳಾ ಬ್ಯಾಸ್ಕೆಟ್ ಬಾಲ್ ತಂಡವು ಚಾಂಪಿಯನ್ ಶಿಪ್ ಉದ್ದಕ್ಕೂ ಅದ್ಭುತ ಕೌಶಲ್ಯ ಮತ್ತು ದೃಢನಿಶ್ಚಯವನ್ನು ಪ್ರದರ್ಶಿಸಿದೆ. ಈ ಸಾಧನೆಯು ಪ್ರತಿಯೊಬ್ಬ ಆಟಗಾರ ಮತ್ತು ತರಬೇತುದಾರರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ