Kannada NewsKarnataka NewsLatest

*ಭೂ ಸ್ವಾಧೀನಾಧಿಕಾರಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸರ್ಕಾರಿ ಭೂಮಿ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕಾರವಾರದ ವಿಶೇಷ ತಹಸಿಲ್ದಾರರನ್ನು (ಭೂ ಸ್ವಾಧೀನಾಧಿಕಾರಿ) ಪೊಲೀಸರು ಬಂಧಿಸಿದ್ದಾರೆ.

ಉಮೇಶ್ ಬಂಧಿತ ಅಧಿಕಾರಿ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಉಳ್ಳಿನಾಗರ ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಸಿದ್ದರು, ಖಾಸಗಿ ವ್ಯಕ್ತಿಗಳಿಗೆ ಭೂಮಿ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.

Home add -Advt

ಈ ಹಿಂದೆ ಉಮೇಶ್ ಕಡೂರು ತಹಶೀಲ್ದಾರ್ ಆಗಿದ್ದರು. ಇದೀಗ ಬೆಂಗಳೂರಿನಲ್ಲಿ ಅಧಿಕಾರಿ ಉಮೇಶ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಅವರು ಸೀ ಬರ್ಡ್ ನೌಕಾ ನೆಲೆ ಭೂಮಿ ಸೇರಿದಂತೆ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.


Related Articles

Back to top button