Kannada NewsKarnataka NewsLatest

*ಎಸ್.ಆರ್.ಎಸ್ ಬಸ್ ನಲ್ಲಿ ಅಕ್ರಮ ಮದ್ಯ ಸಾಗಾಟ; ಬಸ್ ಚಾಲಕ ಅರೆಸ್ಟ್*

72 ಲೀಟರ್ ಗೋವಾ ಮದ್ಯ, ಬಸ್ ಜಪ್ತಿ

ಪ್ರಗತಿವಾಹಿನಿ ಸುದ್ದಿ; ಕಾರವಾರ: ಗೋವಾದಿಂದ ಬೆಂಗಳೂರಿಗೆ ತೆರಳುತಿದ್ದ ಎಸ್.ಆರ್.ಎಸ್ ಬಸ್ ನಲ್ಲಿ ಅಡಗಿಸಿಡಲಾಗಿದ್ದ ಗೋವಾದ ವಿವಿಧ ಬ್ರಾಂಡ್ ನ 72 ಲೀಟರ್ 2595000 ಮೌಲದ್ಯ ಮದ್ಯ ವನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಚಕ್ ಪೋಸ್ಟ್ ನಲ್ಲಿ ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Home add -Advt

ಪ್ರಕರಣ ಸಂಬಂಧ ಬಸ್ ಚಾಲಕನನ್ನು ಬಂಧಿಸಿದ್ದಾರೆ. ಬಾಗಲಕೋಟೆ ಮೂಲದ ಲಿಂಗನಗೌಡ ಪಾಟೀಲ್ (63) ಬಂಧಿತ ಬಸ್ ಚಾಲಕ.

ಗೋವಾದಿಂದ ಬೆಂಗಳೂರಿಗೆ ಬಸ್ ಸಂಚರಿಸುವ ವೇಳೆ ಸೀಟ್ ನ ತಳಭಾಗದ ಕ್ಯಾಬಿನ್ ನಲ್ಲಿ 72 ಲೀಟರ್ ಗೋವಾ ಮದ್ಯವನ್ನು ಹುದುಗಿಸಿಟ್ಟಿದ್ದರು. ಖಚಿತ ಮಾಹಿತಿ ಪಡೆದ ಅಬಕಾರಿ ಇಸ್ಪೆಕ್ಟರ್ ಸದಾಶಿವ್ ಮಾಜಾಳಿ ಚಕ್ ಪೋಸ್ಟ್ ನಲ್ಲಿ ಬಸ್ ತಡೆದು ತಪಾಸಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಘಟನೆ ಸಂಬಂಧ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಸ್ ವಶಕ್ಕೆ ಪಡೆಯಲಾಗಿದೆ.

Related Articles

Back to top button