Kannada NewsKarnataka NewsLatest

*ತಾಯಿ-ಮಗನ ಮೇಲೆ ಬೀದಿನಾಯಿ ದಾಳಿ; ಗಂಭೀರ ಗಾಯ*

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಆಸ್ಪತ್ರೆಗೆ ಹೋಗಿ ವಾಪಸ್ ಆಗುತ್ತಿದ್ದ ತಾಯಿ ಮಗನ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರಿನ ಸಿಂಧಗಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ತಾಯಿ ಹಾಗೂ ಮಗ ಇಬ್ಬರೂ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Related Articles
Home add -Advt

ಗಂಗಮ್ಮ (36) ಹಾಗೂ ಮಗ ಪ್ರೀತಂ (15) ಗಾಯಾಳುಗಳು. ಪ್ರೀತಂ ಆಸ್ಪತ್ರೆಯಿಂದ ಆಗಷ್ಟೇ ಹೊರ ಬಂದು ರಸ್ತೆಯಲ್ಲಿ ನಿಂತಿದ್ದ. ಈ ವೇಳೆ ಏಕಾಏಕಿ ಬೀದಿ ನಾಯಿ ದಾಳಿ ನಡೆಸಿ ಕಚ್ಚಿದೆ. ಮಗನನ್ನು ರಕ್ಷಿಸಲು ಓಡಿ ಬಂದ ತಾಯಿಯನ್ನು ನಾಯಿ ಕಚ್ಚಿದೆ. ಅಕ್ಕ ಪಕ್ಕದ ನಿವಾಸಿಗಳು, ಅಂಗಡಿಯವರು ಓಡಿ ಬಂದು ನಾಯಿಗೆ ಬಡಿದಿದ್ದಾರೆ. ಅಷ್ಟರಲ್ಲಾಗಲೇ ನಾಯಿ ಇಬ್ಬರನ್ನೂ ಕಚ್ಚಿ ಗಾಯಗೊಳಿಸಿದೆ.

ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.


Related Articles

Back to top button