Latest

*ವಿದ್ಯಾರ್ಥಿಯಿಂದಲೇ ಕಾಲೇಜು ಸೆಕ್ಯೂರಿಟಿ ಗಾರ್ಡ್ ಭೀಕರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿಯೊಬ್ಬ ಕಾಲೇಜು ಸೆಕ್ಯೂರಿಟಿ ಗಾರ್ಡ್ ನನ್ನು ಇರಿದು ಕೊಂದಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ನಡೆದಿದೆ.

Home add -Advt

ಜೈ ಕಿಶೋರ್ ರಾಯ್ ಕೊಲೆಯಾಗಿರುವ ಸೆಕ್ಯೂರಿಟಿ ಗಾರ್ಡ್. ಭಾರ್ಗವ್ ಕೊಲೆ ಮಾಡಿರುವ ವಿದ್ಯಾರ್ಥಿ. ಕಾಲೇಜು ಸೆಕ್ಯೂರಿಟಿ ಗಾರ್ಡ್ ಜೈ ಕೊಶೋರ್ ತುಂಬಾ ಸ್ಟ್ರಿಕ್ಟ್ ಆಗಿದ್ದ. ಕಾಲೇಜು ಕಾರ್ಯಕ್ರಮಕ್ಕೆ ವಿದ್ಯಾರ್ಥಿ ಭಾರ್ಗವ್ ಕುಡಿದು ಬಂದಿದ್ದ. ಕುಡಿದು ಬಂದಿದ್ದರಿಂದ ವಿದ್ಯಾರ್ಥಿಯನ್ನು ಸೆಕ್ಯೂರಿಟಿ ಗಾರ್ಡ್ ಒಳಗೆ ಹೋಗಲು ಬಿಟ್ಟಿಲ್ಲ. ಆತನನ್ನು ಬೈದು ಕಳುಹಿಸಿದ್ದರು.

ಇದರಿಂದ ಕೋಪಗೊಂಡ ವಿದ್ಯಾರ್ಥಿ ಭಾರ್ಗವ್ ಅಂಗಡಿಗೆ ಹೋಗಿ ಚಾಕು ಖರೀದಿಸಿ ಬಂದಿದ್ದಾನೆ. ಮತ್ತೆ ಕಾಲೇಜು ಬಳಿ ಬಂದ ಭಾರ್ಗವ್ ಸೆಕ್ಯೂರಿಟಿಗಾರ್ಡ್ ಜೈಕಿಶೋರ್ ಎದೆಗೆ 5 ಬಾರಿ ಮನಬಂದಂತೆ ಇರಿದಿದ್ದಾನೆ. ಸ್ಥಳದಲ್ಲೇ ಸೆಕ್ಯೂರಿಟಿ ಗಾರ್ಡ್ ಸಾವನ್ನಪ್ಪಿದ್ದಾರೆ.


Related Articles

Back to top button