Kannada NewsKarnataka News

*ಡಿವೈಡರ್ ಗೆ ಬೈಕ್ ಡಿಕ್ಕಿ: ಇಬ್ಬರು ಯುವಕರ ಸಾವು*

ಪ್ರಗತಿವಾಹಿನಿ ಸುದ್ದಿ: ಕುಡಿದ ನಶೆಯಲ್ಲಿ ಬೈಕ್ ಚಲಾಯಿಸಿದ ಪರಿಣಾಮ ಡಿವೈಡರ್ ಗೆ ಗುದ್ದಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.‌ ಈ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಬಳಿ ನಡೆದಿದೆ.

Home add -Advt

ಮೃತರನ್ನು ಹರಳಯ್ಯ ನಗರದ ನಿವಾಸಿಗಳಾದ ನಂದನ್ ಶಿವಪ್ಪನವರ(22) ಹಾಗೂ ವೈಭವ ಪಟ್ಟಣ್ಣಶೆಟ್ಟಿ (22) ಎಂದು  ಗುರುತಿಸಲಾಗಿದೆ. ಸುಳ್ಳು ನೆಪ ಹೇಳಿ ಮನೆಯಿಂದ ಹೋಗಿದ್ದ ಇಬ್ಬರು ಸ್ನೇಹಿತರು ರಾತ್ರಿ ಪೂರ್ತಿ ಕುಡಿದು, ಮನೆಗೆ ತೆರಳಿದ್ದಾರೆ. ಈ ವೇಳೆ ರಾಣೇಬೆನ್ನೂರು ನಗರದ ನೇಕಾರ ಕಾಲೋನಿ ಬಳಿ ಬರುವಾಗ ಬೈಕ್ ನಿಯಂತ್ರಣ ತಪ್ಪಿ ಡಿವೈಂಡರಗೆ ಡಿಕ್ಕಿ ಹೊಡೆದಿದೆ. 

ಡಿಕ್ಕಿಯ ರಭಸಕ್ಕೆ ಇಬ್ಬರು ಗಂಭೀರ ಗಾಯಗೊಂಡಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಸದ್ಯ ರಾಣೇಬೆನ್ನೂರು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Related Articles

Back to top button