Politics

*ಸೂರಜ್ ರೇವಣ್ಣ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿಸಬಹುದು ಎಂಬ ಯೋಚನೆಯೂ ಇಲ್ಲದೇ ಸೂರಜ್ ರೇವಣ್ಣ ಸಂತ್ರಸ್ತ ಯುವಕನ ವಿರುದ್ಧ ದೂರು ನೀಡಲೆಂದು ಹಾಸನದ ಸೆನ್ ಠಾಣೆಗೆ ಹೋಗಿದ್ದರು. ಈ ವೇಳೆ ಸೂರಜ್ ನನ್ನು ಸುದೀರ್ಘ ವಿಚಾರಣೆ ನಡೆಸಿದ ಪೊಲೀಸರು ಬಳಿಕ ಬಂಧಿಸಿದ್ದಾರೆ.

ತನ್ನ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವಕನ ವಿರುದ್ಧವೇ ಸೂರಜ್ ರೇವಣ್ಣ ತನ್ನ ಆಪ್ತ ಶಿವಕುಮಾರ್ ಮೂಲಕ ದೂರು ದಾಖಲಿಸಿದ್ದರು. ಯುವಕನೊಬ್ಬ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದರು. ಬ್ಲ್ಯಾಕ್ ಮೇಲ್ ಗೆ ಸಂಬಂಧಿಸಿದಂತೆ ಸಾಕ್ಷ್ಯ ನೀಡಲು ಹಾಸನಸ ಸೆನ್ ಠಾಣೆಗೆ ನಿನ್ನೆ ರಾತ್ರಿ ಸೂರಜ್ ರೇವಣ್ಣ ಹೋಗಿದ್ದ ವೇಳೆ ಸೂರಜ್ ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ರಾತ್ರಿಯಿಡಿ ವಿಚಾರಣೆ ನಡೆಸಿದ ಪೊಲೀಸರು ಇಂದು ಮುಂಜಾನೆ 4 ಗಂಟೆ ವೇಳೆಗೆ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಸಂತ್ರಸ್ತ ಯುವಕ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಸೂರಜ್ ವಿರುದ್ಧ ಅಸಹಜ ಕೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದನು. ಸೆಕ್ಷನ್ 377( ಅಸವಾಭಾವಿಕ ಅಪರಾಧ) 342 (ತಪ್ಪಾದ ಬಂಧನಕ್ಕೆ ಶಿಕ್ಷೆ) 506 (ಬೆದರಿಕೆ) ಅಡಿಯಲ್ಲಿ ದೂರು ದಾಖಲಾಗಿತ್ತು. ಸಂತ್ರಸ್ತ ಯುವಕ ಹಾಸನ ಎಸ್ ಪಿಗೂ ದೂರು ನೀಡಿದ್ದ.

ಸೂರಜ್ ರೇವಣ್ಣ ಗನ್ನಿಕೆಡ ತೋಟದ ಮನೆಯಲ್ಲಿ ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯವೆಸಗಿದ್ದಾಗಿ ಆರೋಪಿಸಿ ದೂರು ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಇದೀಗ ಸೂರಜ್ ನನ್ನು ಬಂಧಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button