ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮಂಗಳೂರಿನ ಸೂರತ್ಕಲ್ ಟೋಲ್ ಗೇಟ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಟೋಲ್ ಗೇಟ್ ಕಿತ್ತೆಸೆಯುವ ಕಾರ್ಯಾಚರಣೆಗೆ ನಾಳೆ ಕರೆ ನಿಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್, ಹೋರಾಟ ಕೈ ಬಿಡುವಂತೆ ಮನವಿ ಮಾಡಿದ್ದಾರೆ.
ಟೋಲ್ ಗೇಟ್ ತೆಗೆದು ಹಾಕಲು ನಾನು ಬದ್ಧನಾಗಿದ್ದೇನೆ. ಖಂಡಿತವಾಗಿಯೂ ಟೋಲ್ ಗೇಟ್ ತೆಗೆಸುತ್ತೇನೆ. ಆದರೆ ಕಾನೂನು ಸಮಸ್ಯೆಯಾಗಿದೆ. ಹೀಗಾಗಿ 20 ದಿನಗಳ ಕಾಲಾವಕಾಶ ನೀಡಿ. ಅಷ್ಟರಲ್ಲಿ ಟೋಲ್ ಗೇಟ್ ತೆಗೆಸಲಾಗುವುದು ಎಂದು ಹೇಳಿದರು.
ಈ ಬಗ್ಗೆ ನಾನು ಕಮಿಷನರ್ ಜೊತೆಯೂ ಮಾತನಾಡಿದ್ದೇನೆ. ಹೋರಾಟಗಾರರಿಗೆ ಯಾವುದೇ ನೋಟೀಸ್ ಕೊಡುವುದು ಬೇಡ. ಶಾಂತಿಯುತ ಹೋರಾಟಕ್ಕೆ ನನ್ನ ವಿರೋಧವಿಲ್ಲ. ಆದರೆ ಕಾನೂನು ಕೈಗೆತ್ತಿಕೊಂಡರೆ ಮುಂದೆ ಆಗುವ ಪರಿಣಾಮಗಳಿಗೆ ನೀವೇ ಜವಾಬ್ದಾರಿ ಎಂದು ಎಚ್ಚರಿಸಿದ್ದಾರೆ.
ಸೂರತ್ಕಲ್ ಟೋಲ್ ಗೇಟ್ ತೆರವು ವಿಚಾರವಾಗಿ ಹೆದ್ದಾರಿ ಪ್ರಾಧಿಕಾರ 20 ದಿನಗಳ ಸಮಯ ಕೇಳಿದೆ. ಹಾಗಾಗಿ ಸಮಯ ಕೊಡಬೇಕಿರುವುದು ನಮ್ಮ ಕರ್ತವ್ಯ. ಹೋರಾಟಗಾರರಿಗೆ ಮತ್ತೆ ಮತ್ತೆ ಮನವಿ ಮಾಡುತ್ತಿದ್ದೇನೆ ನಾಳಿನ ಹೋರಾಟ ಕೈಬಿಡಿ 20 ದಿನ ಸಮಯಾವಕಾಶ ಕೊಡಿ. ಆದರೂ ಸಾಧ್ಯವಾಗದಿದ್ದರೆ ಹೋರಾಟ ಮಾಡುವಂತೆ ತಿಳಿಸಿದ್ದಾರೆ.
https://pragati.taskdun.com/latest/ksrtc-busbikeaccidentwoman-injured/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ