ವಿಶ್ವ ಚಾಂಪಿಯನ್ ಕಾರ್ಲ್ ಸನ್ ರನ್ನು ಸೋಲಿಸಿದ ಭಾರತದ ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್
ಎಮ್ಚೆಸ್ ರಾಪಿಡ್ ನಲ್ಲಿ ಗುಕೇಶ್ ಡಿ. ಸಾಧನೆ
ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: 16 ವರ್ಷದ ಭಾರತದ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ಡಿ ಅವರು ವಿಶ್ವ ಚಾಂಪಿಯನ್ ಕಾರ್ಲ್ಸನ್ ಅವರನ್ನು ಸೋಲಿಸಿದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಮೂಲಕ ಅವರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಏಮ್ಚೆಸ್ ರಾಪಿಡ್ ನ ಒಂಬತ್ತನೇ ಸುತ್ತಿನಲ್ಲಿ ಕಾರ್ಲಸನ್ ಅವರನ್ನು ಸೋಲಿಸುವ ಮೂಲಕ ಗುಕೇಶ್ ಈ ಸಾಧನೆ ಮಾಡಿದರು.
ಇದಕ್ಕೂ ಮುನ್ನ ನಡೆದ ಟೂರ್ನಿಯಲ್ಲಿ ಭಾರತದ 19ರ ಹರೆಯದ ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗೈಸಿ ಕಾರ್ಲ್ಸೆನ್ರನ್ನು ಸೋಲಿಸಿದ್ದರು.