ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಉಗ್ರನೊಬ್ಬನನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಶಂಕಿತ ಉಗ್ರನನ್ನು ಆರೀಫ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಥಣಿಸಂದ್ರದ ಮಂಜುನಾಥ ನಗರದಲ್ಲಿ ಶಂಕಿತ ಉಗ್ರನನ್ನು ಬಂಧಿಸಲಾಗಿದೆ. ಐಎಸ್ ಡಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳಿಂದ ಕಾರ್ಯಾಚರಣೆ ನಡೆಸಿ ಉಗ್ರನನ್ನು ಬಂಧಿದೆ.
ಶಂಕಿತ ಭಯೋತ್ಪಾದಕ ಆರೀಫ್ ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗಿದೆ. 2 ವರ್ಷಗಳಿಂದ ಅಲ್ ಖೈದಾ ಉಗ್ರ ಸಂಘಟನೆ ಜೊತೆ ಆರೀಫ್ ಸಂಪರ್ಕದಲ್ಲಿದ್ದ. ಟೆಲಿಗ್ರಾಮ್ ಗ್ರೂಪ್ ಗಳಲ್ಲಿ ಸಕ್ರಿಯನಾಗಿದ್ದ.
ಅಲ್ಲದೇ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೀಫ್, ವರ್ಕ ಫ್ರಂ ಹೋಂ ಕಾರ್ಯನಿರ್ವಹಿಸುತ್ತಿದ್ದ. ಮುಂದಿನ ವರ್ಷ ಸಿರಿಯಾಗೆ ಹೋಗಲು ಪ್ಲಾನ್ ಮಾಡಿದ್ದ ಎನ್ನಲಾಗಿದೆ.
ಕಚೇರಿ ಕೆಲಸ 5 ದಿನಕ್ಕೆ ಸೀಮಿತಗೊಳಿಸಿ; ಒಂದು ತಾಸು ಕೆಲಸ ಹೆಚ್ಚಿಸಿ
https://pragati.taskdun.com/limit-office-work-to-5-days-increase-work-by-one-hour/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ