Belagavi NewsBelgaum NewsKannada NewsKarnataka NewsLatest

*ಸ್ವಚ್ಛ ಸಂಕೇಶ್ವರ: 1ನೇ ಹಂತದ ಉದ್ಘಾಟನಾ ಸಮಾರಂಭ*

ಪ್ರಗತಿವಾಹಿನಿ ಸುದ್ದಿ; ಸಂಕೇಶ್ವರ: ನಿಡಸೋಶಿಯ ಶ್ರೀ ದುರದುಂಡೇಶ್ವರ ಮಠದ ಒಂದು ನವೀನ ಉಪಕ್ರಮ ಸ್ವಚ್ಛ ಸಂಕೇಶ್ವರ ಒಂದನೇ ಹಂತದ ಉದ್ಘಟನಾ ಕಾರ್ಯಕ್ರಮ ಅಕ್ಟೋಬರ್ 2 ಗಾಂಧಿ ಜಯಂತಿಯಂದು ನಡೆಯಲಿದೆ.

ರಾಷ್ಟ್ರಪಿತ ಮಹಾತ್ಮಾಗಾಂಧಿಯವರ 134ನೇ ಜನ್ಮದಿನದ ಅಂಗವಾಗಿ ನಾಳೆ ಬೆಳಿಗ್ಗೆ 8 ಗಂಟೆಗೆ ಸಂಕೇಶ್ವರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ವಚ್ಛ ಸಂಕೇಶ್ವರಕ್ಕೆ ಚಾಲನೆ ದೊರೆಯಲಿದೆ. ನಿಡಸೋಶಿ ಜಗದ್ಗುರು ದುರದುಂಡೇಶ್ವರ ಮಠದ ಪಂಚಮ ಶಿವಲಿಂಗೇಶ್ವರ ಮಹಾ ಸ್ವಾಮೀಜಿ ನಿರಂಜನ ಪ್ರಣವ ಸ್ವರೂಪಿ ಶ್ರೀ ಸಾನ್ನಿಧ್ಯದಲ್ಲಿ ನಿಡಸೋಶಿ ದುರದುಂಡೇಶ್ವರ ಮಹದ ನಿಜಲಿಂಗೇಶ್ವರ ಸ್ವಾಮೀಜಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

Home add -Advt

ಪುಣೆ ಸಮಾಜ ಸೇವಕ ಚಂದ್ರಕಾಂತ್ ಕುಲಕರ್ಣಿ, ಹುಕ್ಕೇರಿ ಶಾಸಕ ನಿಖಿಲ್ ಉಮೇಶ್ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ್, ಸಂಕೇಶ್ವರದ ಅಪ್ಪಾಸಾಹೇಬ ಶಿರಕೊಳಿ, ಹಿಡಕಲ್ ಸಂಗಂ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ್ ಆಗಮಿಸಲಿದ್ದಾರೆ.


Related Articles

Back to top button