Belagavi NewsBelgaum NewsKannada NewsKarnataka News

*ಬೆಳಗಾವಿಯಲ್ಲಿ ಒಂದೆ ಕುಟುಂಬದ ಎರಡು ಮನೆಗೆ ಬೆಂಕಿ: ಲಕ್ಷಾಂತರ ರೂಪಾಯಿ ಹಾನಿ*

ಪ್ರಗತಿವಾಹಿನಿ ಸುದ್ದಿ: ವಿದ್ಯುತ್ ಶಾಟ್೯ ಸರ್ಕ್ಯೂಟ್ ನಿಂದಾಗಿ ಬೆಳಗಾವಿಯ ಶಹಾಪುರದಲ್ಲಿರುವ ಹೊಸೂರ ಹರಿಜನ ಗಲ್ಲಿಯಲ್ಲಿ ಒಂದೆ ಕುಟುಂಬದ ಎರಡೂ ಮನೆಗಳಿಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿ ಆಗಿದೆ ಎನ್ನಲಾಗಿದೆ.‌

Home add -Advt

ಎರಡು ಮನೆಗಳಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಮನೆಯಲ್ಲಿದ್ಸ ಹಣ ಹಾಗೂ ಮನೆಯ ಸಾಮಗ್ರಿ ಸುಟ್ಟು ಕರಕಲಾಗಿದೆ.  ಶಿವರಾಜ ಆಶೋಕ ಮೊದಗೆ, ಶಶಿಕಾಂತ ಮೊದಗೆ ಎಂಬುವರ ಮನೆಯಲ್ಲಿ ವಿದ್ಯುತ್ ಶಾಟ್೯ ಸರ್ಕಿಟ್ ತಗುಲಿದ ಹಿನ್ನೆಲೆಯಲ್ಲಿ ಮನೆಯಲ್ಲಿ ಮದುವೆ ಸಮಾರಂಭಕ್ಕೆಂದು 6 ಲಕ್ಷ ರೂ. ಹಣ, ಚಿನ್ನಾಭರಣ ಸೇರಿದಂತೆ ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. 

ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ‌. ಯಾವುದೇ ಪ್ರಾಣಾಪಾಯವಾಗಿಲ್ಲ. ಶಹಾಪುರ ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Related Articles

Back to top button