Belagavi NewsBelgaum NewsNational

*ಕುಂಭಮೇಳದಲ್ಲಿ ಕಾಲ್ತುಳಿತ: ಬೆಳಗಾವಿಯ ನಾಲ್ವರು ಸಾವು*

ಪ್ರಗತಿವಾಹಿನಿ ಸುದ್ದಿ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಬೆಳಗಾವಿಯ ನಾಲ್ವರು ಸಾವನ್ನಪ್ಪಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ವಡಗಾವಿ ಮೂಲತ ತಾಯಿ -ಮಗಳು ಜ್ಯೋತಿ ಹಾಗೂ ಮೇಘಾ, ಬೆಳಗಾವಿ ನಗರದ ಶೆಟ್ಟಿಹಳ್ಳಿ ನಿವಾಸಿ ಅರುಣ್ ಕೊಪರ್ಡೆ ಹಾಗೂ ಶಿವಾಜಿ ನಗರ ನಿವಾಸಿ ಮಹಾದೇವ ಹನುಮಂತ ಬಾವನೂರ ಸಾವನ್ನಪ್ಪಿದ್ದಾರೆ. ಅರುಣ್ ಕೋಪರ್ಡೆ ಪತ್ನಿ ಕಾಂಚನಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Home add -Advt

ಬೆಳಗವೈಯಿಂದ 30 ಜನರು ಮಹಾಕುಂಭಮೇಳಕ್ಕೆ ತೆರಳಿದ್ದರು. ಇಂದು ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಮಹಾ ಕುಂಭಮೇಳದಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಕೋಟ್ಯಂತರ ಭಕ್ತರು ಸುನಾಮಿಯಂತೆ ಹರಿದು ಬಂದಿದ್ದಾರೆ. ಭಕ್ತರನ್ನು ನಿಯಂತ್ರಿಸಲು ಸಾಧ್ಯವಾಗದೇ ತ್ರಿವೇಣಿ ಸಂಗಮದ ಬಳಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತ ದುರಂತದಲ್ಲಿ ಬೆಳಗಾವಿ ಜಿಲ್ಲೆಯ ನಾಲ್ವರು ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Related Articles

Back to top button