Kannada NewsKarnataka NewsLatest
ಹುಟ್ಟು ಹಬ್ಬದ ಕೇಕ್ ಕತ್ತರಿಸಲು ಖಡ್ಗ ಬಳಸಿದ್ದ ಯುವಕ ಆರೆಸ್ಟ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹುಟ್ಟು ಹಬ್ಬದ ಕೇಕ್ ಕತ್ತರಿಸಲು ಖಡ್ಗ ಬಳಸಿದ್ದ ಯುವಕನನ್ನು ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಂತ ಬಾಳೆಕುಂದ್ರಿಯ ಪ್ರೇಮ್ ಕೋಲ್ಕಾರ್ ಬಂಧಿತ ಯುವಕ.
ಈತ ತನ್ನ ಹುಟ್ಟು ಹಬ್ಬ ಆಚರಿಸುವಾಗ ಕೇಕ್ ಕತ್ತರಿಸಲು ಖಡ್ಗ ಬಳಸಿ, ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಇದು ತೀವ್ರ ವೈರಲ್ ಆಗಿದ್ದಲ್ಲದೆ ಈ ಬಗ್ಗೆ ಭಾರೀ ಚರ್ಚೆಯೂ ನಡೆದಿತ್ತು.
ಇದೀಗ ಮಾರಿಹಾಳ ಠಾಣೆ ಇನಸ್ಪೆಕ್ಟರ್ ವಿಜಯ ಸಿನ್ನೂರ್ ನೇತೃತ್ವದಲ್ಲಿ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಇದೇ ಮಾದರಿಯ ಈ ಹಿಂದಿನ ಸುದ್ದಿಗಳು –
ತಲವಾರ್ ನಿಂದ ಕೇಕ್ ಕತ್ತರಿಸಿ ಪೋಸ್ ಕೊಟ್ಟ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆ
ತಲವಾರ್ ನಿಂದ್ ಹುಟ್ಟುಹಬ್ಬದ ಕೇಕ್ ಕತ್ತರಿಸಿದ್ದ ಬಿಜೆಪಿ ಮುಖಂಡನ ಬಂಧನ




