Latest

ಮಿನಿ ವಿಧಾನಸೌಧ ಮಾರಾಟಕ್ಕಿಟ್ಟಿದ್ದ ರೈತ ನಿಗೂಢ ಸಾವು: 7 ಜನರ ವಿರುದ್ಧ ಪ್ರಕರಣ

ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಮಿನಿ ವಿಧಾನಸೌಧವನ್ನು ಮಾರಾಟಕ್ಕಿಟ್ಟಿದ್ದ ರೈತ ಇದೀಗ ನಿಗೂಢವಾಗಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ಮಿನಿ ವಿಧಾನಸೌಧವನ್ನು ಮಾರಾಟಕ್ಕಿಟ್ಟಿದ್ದ ರೈತ ಇದೀಗ ತನ್ನ ಜಮೀನಿನ ಪಕ್ಕದಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ರೈತ ಬಾಣಕಾರ ಮಲ್ಲಪ್ಪ ಇತ್ತೀಚೆಗೆ ತನ್ನ ಜಮೀನಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗಿದೆ. ತನಗೆ ಪರಿಹಾರ ನೀಡುವುದಾಗಿ ಹೇಳಿ ಜಮೀನು ವಶಪಡಿಸಿಕೊಂಡ ಲೇಔಟ್ ನಿರ್ಮಾಪಕರು ಪರಿಹಾರವನ್ನೂ ನೀಡದೇ ಅನ್ಯಾಯವೆಸಗಿದ್ದಾರೆ ಎಂದು ಕಣ್ಣೀರಿಟ್ಟಿದ್ದರು. ಅಲ್ಲದೇ ನ್ಯಾಯಕ್ಕಾಗಿ ಅಲೆದಾಡಿ ಬೇಸತ್ತಿದ್ದು, ಇದೀಗ ನನ್ನ ಜಮೀನಿನ ಜಾಗದಲ್ಲಿ ನಿರ್ಮಿಸಿರುವ ಮಿನಿ ವಿಧಾನಸೌಧ ಮಾರಾಟಕ್ಕಿಟ್ಟಿದ್ದೇನೆ ಎಂದು ಪ್ರತಿಭಟನೆ ನಡೆಸಿದ್ದರು.

Home add -Advt

ಹೀಗೆ ಪ್ರತಿಭಟನೆ ನಡೆಸುತ್ತಿದ್ದ ರೈತ ಜನವರಿ 30ರಂದು ಏಕಾಏಕಿ ನಾಪತ್ತೆಯಾಗಿದ್ದರು. ಈ ಬಗ್ಗೆ ಹೂವಿನಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ರೈತ ಬಣಕಾರ ಮಲ್ಲಪ್ಪ ಶವ ಅವರ ಜಮೀನು ಪಕ್ಕದಲ್ಲೇ ಪತ್ತೆಯಾಗಿದ್ದು, ಶವದ ಬಳಿ ವಿಷದ ಬಾಟಲ್ ಕೂಡ ಪತ್ತೆಯಾಗಿದೆ.

ಪ್ರತಿಭಟನೆ ನಡೆಸಿದ್ದ ರೈತ ಕೆಲದಿನಗಳ ಹಿಂದೆ ನಾಪತ್ತೆಯಾಗಿ, ಇದೀಗ ಜಮೀನು ಪಕ್ಕದಲ್ಲೇ ಶವವಾಗಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಮಹಿಳೆಯ ಮೇಲೆ ದೌರ್ಜನ್ಯ; ಸೇಡಂ ಬಿಜೆಪಿ ಶಾಸಕರ ವಿರುದ್ಧ ಆರೋಪ

Related Articles

Back to top button