Latest

ಹುತಾತ್ಮ ಯೋಧನ ಮನೆಗೆ ದಿನೇಶ್ ಗುಂಡೂರಾವ್ ಭೇಟಿ; 10 ಲಕ್ಷ ರೂ. ಚೆಕ್ ಹಸ್ತಾಂತರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
 ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮದ್ದೂರಿನ ಗುಡಿಗೆರೆಯ ವೀರಯೋಧ ದಿವಂಗತ ಹೆಚ್.  ಗುರು ಅವರ    ಮನೆಗೆ ಭೇಟಿ ನೀಡಿ, ಕೆಪಿಸಿಸಿ ವತಿಯಿಂದ 5 ಲಕ್ಷ ರೂಪಾಯಿ ಚೆಕ್ ನ್ನು  ವೀರಯೋಧ  ಗುರು ತಂದೆಗೆ ಹಾಗೂ ಡಿಸಿಸಿ ಬ್ಯಾಂಕ್ ವತಿಯಿಂದ 5 ಲಕ್ಷ ರೂಪಾಯಿ ಚೆಕ್ ನ್ನು ವೀರ ಯೋಧ ಗುರು ಅವರ ಪತ್ನಿಗೆ  ನೀಡಿದರು.
ಈ ಸಂದರ್ಭದಲ್ಲಿ  ಎಐಸಿಸಿ ಕಾರ್ಯದರ್ಶಿ  ಪಿ.ಸಿ. ವಿಷ್ಣುನಾಧನ್, ಮಾಜಿ ಸಚಿವ ಚೆಲುವರಾಯ ಸ್ವಾಮಿ, ಎಂ.ಎಸ್ ಆತ್ಮಾನಂದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ ಗಂಗಾಧರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸತ್ಯನ್ ಪುತ್ತೂರ್  ಅವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button