Belagavi NewsBelgaum NewsKannada NewsKarnataka NewsLatest

*ಬೆಳಗಾವಿಯಲ್ಲಿ ಭಾರೀ ಮಳೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆಲವು ದಿನಗಳ ಬಿಡುವಿನ ನಂತರ ಬೆಳಗಾವಿಯಲ್ಲಿ ಬುಧವಾರ ಸಂಜೆಯಿಂದ ಭಾರೀ ಮಳೆ ಸುರಿಯುತ್ತಿದೆ.

ಸಂಜೆ ಸುಮಾರು 6.30ರ ಹೊತ್ತಿಗೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಮುಂದುವರಿದಿದೆ. ಇದರಿಂದಾಗಿ ವಾಹನ ಸಂಚಾರ ಹಾಗೂ ಭಾರೀ ಜನ ದಟ್ಟಣೆಯಿಂದ ಕೂಡಿದ್ದ ಮಾರುಕಟ್ಟೆ ಪ್ರದೇಶ ಅಸ್ತವ್ಯಸ್ತವಾಯಿತು.

ಮಂಗಳವಾರ ಸಂಜೆ ಸಹ ದಟ್ಟಣೆಯ ಮೋಡ ಕವಿದಿತ್ತಾದರೂ ಮಳೆಯಾಗಿರಲಿಲ್ಲ. ಬುಧವಾರ ಸಂಜೆ ಮೊಡ ಕವಿದು ಭಾರೀ ಪ್ರಮಾಣದಲ್ಲಿ ಮಳೆ ಸುರಿಯಿತು. ಅನಿರೀಕ್ಷಿತ ಮಳೆಯಿಂದಾಗಿ ದ್ವಿಚಕ್ರ ವಾಹನ ಸವಾರರು ಹಾಗೂ ಮಾರುಕಟ್ಟೆಗೆ ಬಂದಿದ್ದ ಜನರು ತೀವ್ರ ಪರದಾಡಬೇಕಾಯಿತು. ಬೀದಿ ಬದಿ ವ್ಯಾಪಾರಸ್ತರು ಪರದಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button