Kannada NewsKarnataka NewsLatest

ಅಂತ್ಯಕ್ರಿಯೆಗೆ ಸಿದ್ದತೆ ನಡೆಸಿದ್ದಾಗಲೇ ಎದ್ದು ಕುಳಿತಳು -ಬೆಳಗಾವಿಯಲ್ಲಿ ವಿಚಿತ್ರ ಘಟನೆ

ಪ್ರಗತಿವಾಹಿನಿ ನ್ಯೂಸ್, ಬೆಳಗಾವಿ -: ತಾಲೂಕಿನ ಮುಚ್ಚಂಡಿಯ 55 ವರ್ಷದ ಮಹಿಳೆ ಮೃತಪಟ್ಟಿದ್ದಾಳೆಂದು ಆಸ್ಪತ್ರೆಯಿಂದ ತಂದು ಅಂತ್ಯಕ್ರಿಯೆ ನಡೆಸುವ ಸಿದ್ಧತೆಯಲ್ಲಿರುವಾಗಲೇ ಎದ್ದು ಕುಳಿತ ವಿಚಿತ್ರ ಘಟನೆ ನಡೆದಿದೆ.

ಮಾಲು ಯಲ್ಲಪ್ಪ ಚೌಗಲೆ ಎನ್ನುವ ಮಹಿಳೆ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಆಕೆ ಈ ಹಿಂದೆ ಅಪಘಾತವೊಂದರಲ್ಲಿ ತೀವ್ರ ಗಾಯಗೊಂಡಿದ್ದಳು. ಜ್ವರದ ಹಿನ್ನೆಲೆಯಲ್ಲಿ ಪ್ರಜ್ಞೆ ತಪ್ಪಿದ್ದ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬುಧವಾರ ಮಧ್ಯಾಹ್ನ 3 ಗಂಟೆಗೆ ಆಕೆ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರೆನ್ನಲಾಗಿದೆ.

Home add -Advt

ಹಾಗಾಗಿ ಆಕೆಯ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲು ಮನೆಗೆ ತಿಳಿಸಿ, ಮನೆಗೆ ಕರೆದೊಯ್ಯಲಾಯಿತು. ಹೊಗುವಷ್ಟರಲ್ಲಿ ಆಕೆಯ ಹಲವಾರು ಸಂಬಂಧಿಕರೂ ಅಲ್ಲಿಗೆ ತಲುಪಿದ್ದರು. ಇನ್ನೇನು ಅಂತ್ಯಕ್ರಿಯೆಗೆ ಕರೆದೊಯ್ಯಬೇಕೆನ್ನುವಷ್ಟರಲ್ಲಿ ಆಕೆ ಎದ್ದು ಕುಳಿತಿದ್ದಾಳೆ.

ಅಲ್ಲಿ ಜನ ಸೇರಿದ್ದು ನೋಡಿ ಆಕೆ ಆಶ್ಚರ್ಯಪಟ್ಟರೆ, ಸೇರಿದ್ದ ಜನರೆಲ್ಲ ಮಾಲು ಎದ್ದು ಕುಳಿತಿದ್ದನ್ನು ನೋಡಿ ತಮ್ಮನ್ನೇ ತಾವು ನಂಬದಾದರು.

Woman ‘Dead’ at Hospital Got Back Life at Home, Before Funeral

Related Articles

Back to top button