Latest

ಮನೆ ಮೆಟ್ಟಿಲುಗಳಿಂದ ಬಿದ್ದು ಬಿಜೆಪಿ ಹಿರಿಯ ನಾಯಕ ಸುಂದರ್ ಲಾಲ್ ದೀಕ್ಷಿತ್ ಸಾವು

ಪ್ರಗತಿವಾಹಿನಿ ಸುದ್ದಿ, ಲಕ್ನೋ: ಹೈದರ್‌ಗಡ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮತ್ತು ಬಿಜೆಪಿ ಹಿರಿಯ ನಾಯಕ ಸುಂದರ್ ಲಾಲ್ ದೀಕ್ಷಿತ್ (80) ಮನೆಯಲ್ಲಿ ಮೆಟ್ಟಿಲುಗಳಿಂದ ಬಿದ್ದು ಮೃತಪಟ್ಟಿದ್ದಾರೆ.

ಸುಂದರ್ ಲಾಲ್ ದೀಕ್ಷಿತ್  ಲಕ್ನೋದಲ್ಲಿ ತಮ್ಮ ಮನೆಯ ಮೆಟ್ಟಿಲುಗಳಿಂದ ಶನಿವಾರ ಕೆಳಗೆ ಬಿದ್ದರು. ಬೀಳುವ ಸಮಯದಲ್ಲಿ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಲಕ್ನೋದ ಲೋಹಿಯಾ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾಗಿ ಘೋಷಿಸಿದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

Home add -Advt

ಅವರು ಹೈದರ್‌ಗಡ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ, ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬೃಜೇಶ್ ಪಾಠಕ್ ಸೇರಿದಂತೆ ಇತರರು ಸುಂದರ್ ಲಾಲ್ ದೀಕ್ಷಿತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಹಿಂಡಲಗಾ ಜೈಲಿನ ಕೈದಿಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ

https://pragati.taskdun.com/an-inmate-of-hindalaga-jail-threatened-union-minister-nitin-gadkari/

ಮದುವೆ ಮುನ್ನಾ ದಿನ ಕುಸಿದು ಬಿದ್ದು ಮೃತಪಟ್ಟ ಯುವತಿ

https://pragati.taskdun.com/girl-died-previous-day-of-her-marriage/

ಷರತ್ತಿಗೆ ಅವಕಾಶವಿಲ್ಲ, ಬೇಷರತ್ ಬರುವವರಿಗೆ ಸ್ವಾಗತ – ಡಿಕೆಶಿ

https://pragati.taskdun.com/h-nagesh-ys-v-dutta-and-many-others-joined-congress/

Related Articles

Back to top button