ಜ.31ರಂದು ಸಂಪುಟ ವಿಸ್ತರಣೆ ಸಾಧ್ಯತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಕೂನೆಗೂ ದಿನಾಂಕ ನಿಗದಿಯಾಗಿದೆ. ಜನವರಿ 31 ರಂದು ಶುಕ್ರವಾರ ಸಂಪುಟ ವಿಸ್ತರಣೆ ನಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ.

ಗುರುವಾರದಂದು ಸಿಎಂ ಬಿ ಎಸ್ ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಗುರುವಾರ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಚರ್ಚೆ ನಡೆಸಲಿರುವ ಸಿಎಂ, ಅಂದೇ ಸಚಿವ ಸಂಪುಟ ಕುರಿತು ಮಾತುಕತೆ ಅಂತಮ ಮಾಡಲಿದ್ದಾರೆ. ಹೈಕಮಾಂಡ್ ಅಂದೇ ಒಪ್ಪಿಗೆ ಕೊಟ್ಟರೆ ಜನವರಿ 31 ರಂದು ಸಂಪುಟ ವಿಸ್ತರಣೆ ನಡೆಯಲಿದೆ.

Home add -Advt

ಸಿಎಂ ದೆಹಲಿಗೆ ಹೋಗುವ ಕುರಿತು ನಾಳೆ ಸ್ಪಷ್ಟತೆ ಸಿಗಲಿದೆ. ಒಂದೊಮ್ಮೆ ದೆಹಲಿಗೆ ಸಿಎಂ ಬಿಎಸ್‍ವೈ ತೆರಳದಿದ್ದರೂ ಜನವರಿ 31ರಂದೇ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಮಾಹಿತಿಗಳ ಪ್ರಕಾರ ಮಿತ್ರಮಂಡಳಿ ಶಾಸಕರ ಪೈಕಿ 9 ರಿಂದ 10 ಜನರಿಗೆ ಸಚಿವ ಸ್ಥಾನ ಕೊಡೋದು ನಿರ್ಧಾರ ಆಗಿದೆ. ಪಕ್ಷದ ಮೂಲ ಶಾಸಕರ ಪೈಕಿ 2 ರಿಂದ 4 ಜನರಿಗೆ ಇದೇ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗುವ ಸಾಧ್ಯತೆಯೂ ದಟ್ಟವಾಗಿದೆ.

Related Articles

Back to top button