Kannada NewsKarnataka News
ಏಸು ಜಗತ್ತಿಗೆ ಮಾನವೀಯತೆ, ದಯಾಗುಣವನ್ನು ಸಾರಿದ ಶಾಂತಿಧೂತ – ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ - ಮನುಕುಲದ ಪಾಪ ಪರಿಹಾರಕ್ಕಾಗಿ ಶಾಂತಿಧೂತ ಏಸು ಕ್ರಿಸ್ತರು ತಮ್ಮನ್ನು ತಾವು ಸಮರ್ಪಿಸಿಕೊಂಡು ಜಗತ್ತಿಗೆ ಮಾನವೀಯತೆ, ದಯಾಗುಣವನ್ನು ಸಾರಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಬೆಳಗುಂದಿ ಗ್ರಾಮದಲ್ಲಿ ಭಾನುವಾರ ಕ್ರಿಶ್ಚಿಯನ್ ಧರ್ಮದವರು ಆಯೋಜಿಸಿದ್ದ ಯಾತ್ರಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶಾಂತಿಧೂತರಾದ ಏಸು ಕ್ರಿಸ್ತರು ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತರಾಗಿರಲಿಲ್ಲ. ಅವರೊಬ್ಬ ವಿಶ್ವ ಮಾನವರಾಗಿ, ಇಡೀ ವಿಶ್ವಕ್ಕೆ ಶಾಂತಿಧೂತರಾಗಿ ಹೊರಹೊಮ್ಮಿದ್ದರು. ಕರುಣೆ, ಶಾಂತಿ, ಸೌಹಾರ್ದತೆ, ಪ್ರೀತಿ, ವಿಶ್ವಾಸವನ್ನು ಇಡೀ ವಿಶ್ವಕ್ಕೆ ಬೋಧಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಫಾದರ್ ಅಗ್ನಿಲ್ ಫಿಗ್ರ್ಯಾಂಡೋ, ಜಾನ್ ಫರ್ನಾಂಡೀಸ್, ನೀಲ್ಸನ್ ಪಿಂಟೂ, ಸಂತೋಷ ಫರ್ನಾಂಡೀಸ್, ಯಲ್ಲಪ್ಪ ಡೇಕೋಲ್ಕರ್, ಸುರೇಶ ಕೀಣೆಕರ್, ರೇಹಮಾನ ತಹಶಿಲ್ದಾರ, ಪ್ರಲ್ಹಾದ್, ಏಸು ಕ್ರಿಸ್ತ ಆರಾಧಕರು ಉಪಸ್ಥಿತರಿದ್ದರು.




