Latest

ನಟ ಚೇತನ್ ವಿರುದ್ಧ ಕೇಸ್ ಮೇಲೆ ಕೇಸ್ ದಾಖಲು

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಕಾಂತಾರಾ ಚಿತ್ರದ ಜನಪ್ರಿಯತೆ ನಡುವೆಯೇ ಚಿತ್ರದಲ್ಲಿದ್ದ ಭೂತಕೋಲ ಆಚರಣೆ ವಿಚಾರವಾಗಿ ಮಾತನಾಡಿದ್ದ ನಟ ಚೇತನ್, ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ಚೇತನ್ ವಿರುದ್ಧ ಎರಡನೇ ಕೇಸ್ ದಾಖಲಾಗಿದೆ.

ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದು ಹೇಳಿಕೆ ನೀಡಿದ್ದ ನಟ ಚೇತನ್ ವಿರುದ್ಧ ನಿನ್ನೆ ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ದೂರು ನೀಡಿದ್ದರು. ಧಾರ್ಮಿಕ ಭಾವನೆಗೆ ಧಕ್ಕೆ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿತ್ತು.

Home add -Advt

ಇದೀಗ ಧಾರವಾಡದ ಉಪನಗರ ಠಾಣೆಯಲ್ಲಿಯೂ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಚೇತನ್ ವಿರುದ್ಧ ದೂರು ದಾಖಲಿಸಿದ್ದಾರೆ. ಚೇತನ್ ಭಾರತದ ಪ್ರಜೆಯೇ ಅಲ್ಲ. ಇಲ್ಲಿ ಬಂದು ಹಿಂದೂ ಧರ್ಮ ಒಡೆಯಲು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನೂ ಮೂರು ದಿನ ಭಾರಿ ಮಳೆ; ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

https://pragati.taskdun.com/latest/karnataka3-daysheavy-rain/

Related Articles

Back to top button